ಕೆಲವರು ಟ್ರಿಪ್ ಗೆ ಹೋದಾಗ ಐಷರಾಮಿ ಹೋಟೆಲ್ ಗಳಲ್ಲಿ ತಂಗಬೇಕು ಎಂದು ಬಯಸುವುದು ಸಹಜ.ಈ ಆಹಾರ ಪ್ರಿಯರು ಬಗೆ ಬಗೆಯ ಖಾದ್ಯಗಳ ರುಚಿ ಸವಿಯಲು ಮೊದಲು ಹುಡುಕುವುದೇ ಯಾವ ಹೋಟೆಲ್ ಬೆಸ್ಟ್ ಎಂದು. ಆದರೆ ಕೆಲ ರೆಸ್ಟೋರೆಂಟ್ ಹಾಗೂ ಹೋಟೆಲ್ ಗಳನ್ನು ನೋಡಿದರೆ ಕಣ್ಣು ತಂಪಾಗುತ್ತದೆ. ಹೌದು, ಈಗೇನಿದ್ದರೂ ದುಬಾರಿ ಬೆಲೆಯ ಎಲ್ಲಾ ಸೌಕರ್ಯಗಳು ಹಾಗೂ ರುಚಿಕರ ಆಹಾರ ಸಿಗುವ ಹೋಟೆಲ್ ಗಳು ಬೇಕಾದಷ್ಟು ಇವೆ. ಭಾರತದಲ್ಲಿ ಸಾಕಷ್ಟು ಐಷಾರಾಮಿ ಸೌಕರ್ಯಗಳನ್ನು ಒಳಗೊಂಡ ಫೈವ್ ಸ್ಟಾರ್ ಹಾಗೂ ಸೆವೆನ್ ಸ್ಟಾರ್ ಹೋಟೆಲ್ ಗಳ ಬಗ್ಗೆ ನೀವು ಕೇಳಿರುತ್ತೀರಿ. ಶ್ರೀಮಂತ ವರ್ಗದ ಜನರು ಅಂತಹ ಹೋಟೆಲ್ ಗಳಲ್ಲಿ ತಂಗಿರುತ್ತಾರೆ. ಆದರೆ ನೀವು ಭಾರತದ ಹಳೆಯ ಹಾಗೂ ಮೊದಲ ಹೋಟೆಲ್ ಬಗ್ಗೆ ತಿಳಿದುಕೊಳ್ಳಲೇಬೇಕು. ಈ ಹೋಟೆಲ್ ಇರುವುದು ಕೋಲ್ಕತ್ತಾದಲ್ಲಿ. ಈ ಹೋಟೆಲ್ ಹೆಸರು ಗ್ರೇಟ್ ಈಸ್ಟರ್ನ್ ಹೋಟೆಲ್. ಹಳೆಯ ಹೋಟೆಲ್ ಎನ್ನುವ ಖ್ಯಾತಿಗೆ ಪಾತ್ರವಾಗಿರುವ ಈ ಹೋಟೆಲನ್ನು 1840 -41 ರಲ್ಲಿ ಡೇವಿಡ್ ವೀಲ್ಸನ್ ಎನ್ನುವ ವ್ಯಕ್ತಿಯೂ ನಿರ್ಮಿಸಿದನು. ಈಸ್ಟ್ ಇಂಡಿಯಾ ಕಂಪೆನಿಯ ಕೇಂದ್ರ ಕೋಲ್ಕತ್ತಾವಾಗಿದ್ದರಿಂದ ಬ್ರಿಟಿಷ್ ಅಧಿಕಾರಿಗಳು ಸೇರಿದಂತೆ ಅನೇಕರು ತಂಗಲು ಆ ಕಾಲದಲ್ಲಿ ಈ ಹೋಟೆಲನ್ನೆ ಆಯ್ಕೆ ಮಾಡಿಕೊಳ್ಳುತ್ತಿದ್ದರು. ಕೋಲ್ಕತ್ತಾದ ಓಲ್ಡ್ ಕೋರ್ಟ್ ಸ್ಟ್ರೀಟ್ ನಲ್ಲಿ ನಿರ್ಮಾಣವಾಗಿದ್ದ ಈ ಹೋಟೆಲ್ ಅಂದಿನ ಕಾಲದಲ್ಲಿ ಐಷಾರಾಮಿ ಹೋಟೆಲ್ ಗೆ ಸೇರ್ಪಡೆಯಾಗಿತ್ತು.1883 ರಲ್ಲಿ ಮೊದಲ ವಿದ್ಯುದೀಕರಣಗೊಂಡ ಹೋಟೆಲ್ ಆಗಿ ಮಾರ್ಪಡಾಯಿತು.
ಯೋಗೇಶ್ ಶಿರೂರು
0 Comments