Ticker

6/recent/ticker-posts

Ad Code

Responsive Advertisement

*ಬ್ರಿಟನ್​​ನಿಂದ ಗುಳೆ ಹೊರಟ ಶ್ರೀಮಂತರ ಪಟ್ಟಿಗೆ ಭಾರತ ಮೂಲದ ಶ್ರವಿಣ್ ಸೇರ್ಪಡೆ; ಸಾಹುಕಾರರು ಯುಕೆ ಬಿಡಲು ಏನು ಕಾರಣ?***


*ಲಂಡನ್:* ಬ್ರಿಟನ್​​ನ ಶ್ರೀಮಂತರು ದೇಶ ತೊರೆದು ಹೋಗುತ್ತಿರುವುದು ಮುಂದುವರಿದಿದೆ. ಈ ಉದ್ದನೆಯ ಪಟ್ಟಿಗೆ ಶ್ರವಿಣ್ ಭಾರ್ತಿ ಮಿಟ್ಟಲ್  ಸೇರ್ಪಡೆಯಾಗಿದ್ದಾರೆ. ಭಾರತದ ಶ್ರೀಮಂತ ಕುಟುಂಬಗಳಲ್ಲಿ ಒಂದಾದ ಭಾರ್ತಿ ಮಿಟ್ಟಲ್ ಫ್ಯಾಮಿಲಿಯ ವಾರಸುದಾರರಲ್ಲೊಬ್ಬರೆನಿಸಿರುವ ಶ್ರವಿಣ್ ಅವರು ತಮ್ಮ ನಿವಾಸವನ್ನು ಬ್ರಿಟನ್​​ನಿಂದ ಯುಎಇಗೆ ವರ್ಗಾಯಿಸಿದ್ದಾರೆ. 37 ವರ್ಷದ ಶ್ರವಿನ್ ಭಾರ್ತಿ ಮಿಟ್ಟಲ್ ಅವರು ಏರ್ಟೆಲ್ ಸಂಸ್ಥಾಪಕ ಸುನೀಲ್ ಭಾರ್ತಿ ಮಿಟ್ಟಲ್ ಅವರ ಮಗ. ಬ್ರಿಟನ್​​ನ ಟೆಲಿಕಮ್ಯೂನಿಕೇಶನ್ ಕಂಪನಿಯಾದ ಬಿಟಿ ಗ್ರೂಪ್​ನ ಅತಿದೊಡ್ಡ ಷೇರುದಾರರಾಗಿದ್ದಾರೆ. ಭಾರ್ತಿ ಮಿಟ್ಟಲ್ ಕುಟುಂಬದ ಶ್ರೀಮಂತಿಕೆ ಬರೋಬ್ಬರಿ 27.2 ಬಿಲಿಯನ್ ಡಾಲರ್​​ನಷ್ಟಿದೆ.ಬ್ರಿಟನ್​​ನಿಂದ ನಿರ್ಗಮಿಸುತ್ತಿರುವವರಲ್ಲಿ ಶ್ರವಿನ್ ಮೊದಲಿಗರಲ್ಲ. ನೂರಾರು ಶ್ರೀಮಂತರು ಇತ್ತೀಚಿನ ತಿಂಗಳುಗಳಿಂದ ಯುಕೆಯಿಂದ ಬೇರೆಡೆಗೆ ವಾಸಸ್ಥಳ ಬದಲಿಸಿಕೊಂಡಿದ್ದಾರೆ. ಈಜಿಪ್ಟ್ ಮೂಲದ ಶ್ರೀಮಂತ ನಾಸಫ್ ಸಾವಿರಿಸ್ ಅವರು ಅಬುಧಾಬಿ ಮತ್ತು ಇಟಲಿಗೆ ನಿವಾಸ ಬದಲಿಸಿಕೊಂಡಿದ್ದಾರೆ. ಲಜಾರಿ ಕುಟುಂಬದ ಲಿಯೋನಿಡಾಸ್ ಮತ್ತು ನಿಕೋಲಾಸ್ ಅವರು ಸೈಪ್ರಸ್​​ಗೆ ಹೋಗಿದ್ದಾರೆ. ಉಕ್ಕು ಉದ್ಯಮಿ ಹಾಗೂ ಭಾರತ ಮೂಲದವರೇ ಆದ ಲಕ್ಷ್ಮೀ ಮಿಟ್ಟಲ್ ಅವರೂ ಕೂಡ ಬ್ರಿಟನ್ ತೊರೆಯುತ್ತಿದ್ದಾರೆ.

Post a Comment

0 Comments