ಮೊಗವೀರ ಮಹಾಜನ ಸೇವಾಸಂಘ ರಿ ಮುಂಬೈ ಡೊಂಬಿವಲಿ ಕಮಿಟಿಯ ಸದಸ್ಯರು , ತನ್ನ ಬಳಿ ಬಂದವರಿಗೆ ಕೈಲಾದ ಸಹಾಯ ಮಾಡುತ್ತ, ಕುಲ ಬಾಂದವರು ಕುಟುಂಬದವರ ಬಗ್ಗೆ ಅಪಾರ ಅಭಿಮಾನ ಹೊಂದಿರುವ ಕೊಡುಗೈ ದಾನಿ ಉದ್ಯಮಿ ರಾಜು ಮೊಗವೀರ ದೊಂಬೆ ಇವರ ಧರ್ಮಪತ್ನಿ ಶ್ರೀಮತಿ ಸುಮತಿ ಮೊಗವೀರ
ದಿನಾಂಕ 24.5.25 ರಂದು ಇಂಡೋನೆಷ್ಯಾದಲ್ಲಿ ನಡೆದ ಯೋಗ ಸ್ಪರ್ಧೆಯಲ್ಲಿ ದ್ವಿತೀಯ ಪ್ರಶಸ್ತಿ ಪಡೆದಿರುತ್ತಾರೆ. ಕಳೆದ ಹಲವಾರು ವರ್ಷಗಳಿಂದ ಯೋಗಾಸನದಲ್ಲಿ ತೊಡಗಿಕೊಂಡಿರುವ ಇವರು ಈಗಾಗಲೇ ಅನೇಕ ಪ್ರಶಸ್ತಿ ಪಡೆದಿದ್ದಾರೆ.
ಇವರ ಪತಿ ರಾಜು ಮೊಗವೀರರು ಕೂಡ ಸದಾ ಜನ ಸೇವೆಯಲ್ಲಿ ತೊಡಗಿಕೊಂಡವರು, ಊರಿನ ಹಲವಾರು ದೇವಾಲಯಗಳಿಗೆ ,
ದೇವಾಲಯದ ಜಿರ್ಣೊದ್ದಾರಗಳಿಗೆ ಕೈಲಾದ ಸಹಾಯ ಮಾಡಿದವರು , ಇವರ ಸಾಧನೆಗೆ ಮೊಗವೀರ ಮಹಾಜನ ಸೇವಾಸಂಘ ಬಗ್ವಾಡಿ ಹೋಬಳಿ ಮುಂಬೈ ಸರ್ವ ಸದಸ್ಯರು , ಊರ ಮೊಗವೀರ ಬಾಂದವರು, ಮೊಗವೀರ ನಾಯಕರುಗಳು ಅಭಿನಂದನೆ ಸಲ್ಲಿಸಿದ್ದಾರೆ....
ಯೋಗೇಶ್ ಶಿರೂರು
0 Comments