*ಬೆಂಗಳೂರು:* ಸದ್ಯದ ಪರಿಸ್ಥಿತಿಯಲ್ಲಿ ಮಾರುಕಟ್ಟೆಯಲ್ಲಿ ಯಾವುದು ನಕಲಿ ಯಾವುದು ಅಸಲಿ ಎಂದು ತಿಳಿಯುವುದೇ ದೊಡ್ಡ ಸವಾಲಾಗಿದೆ. ಕಲಬೆರಕೆ ಉತ್ಪನ್ನ, ಕಳಪೆ ಗುಣಮಟ್ಟದ ಸಾಮಗ್ರಿ, ಕಳಪೆ ಆಹಾರ, ಕಳಪೆ ಔಷಧ, ಕಳಪೆ ಕಾಸ್ಮೆಟಿಕ್ಸ್ ಹೆಚ್ಚಾಗಿವೆ. ಇವುಗಳು ಮನುಷ್ಯರ ಆರೋಗ್ಯದ ಮೇಲೆ ಬಹಳ ದುಷ್ಪರಿಣಾಮ ಬೀರುತ್ತಿವೆ. ಈ ಹಿನ್ನೆಲೆಯಲ್ಲಿ ಇದೀಗ ಆರೋಗ್ಯ ಇಲಾಖೆ ಉತ್ತಮ ಕಾರ್ಯಕ್ಕೆ ಮುಂದಾಗಿದೆ. ಸದ್ಯ ಕರ್ನಾಟಕದಲಲ್ಲಿ ನಕಲಿ ಬ್ರಾಂಡ್ ವಾಟರ್ ಬಾಟಲ್ಗಳ ಮಾರಾಟವಾಗುತ್ತಿದೆ ಎಂಬ ಅನುಮಾನ ಬಂದ ಕಾರಣ, ಸ್ಯಾಂಪಲ್ಗಳನ್ನು ಪಡೆಯಲಾಗಿದ್ದು ಪ್ರಯೋಗಾಲಯ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ. ಈ ವಾರದಲ್ಲಿ 288 ವಾಟರ್ ಬಾಟಲ್ ಸ್ಯಾಂಪಲ್ ಪರೀಕ್ಷೆಯ ವರದಿ ಹೊರ ಬರಲಿದೆ. ಮಿನಿರಲ್ ವಾಟರ್ ಎಂದು ಬ್ರಾಂಡ್ ಹೆಸರಗಳುನ್ನು ಬಳಿಸಿಕೊಂಡು ಜನರಲ್ಲಿ ಗೊಂದಲ ಸೃಷ್ಟಿಸಿ ಟೋಪಿ ಹಾಕುವ ವಾಟರ್ ಬಾಟಲ್ಗಳ ಬಂಡಾವಳ ಹೊರ ಬೀಳಲಿದೆ. ಬೆಂಗಳೂರು ಸೇರಿದಂತೆ ಕರ್ನಾಟಕದ ವಿವಿಧ ಕಡೆಗಳಿಂದ ಆಹಾರ ಇಲಾಖೆ 288 ವಾಟರ್ ಬಾಟಲ್ಗಳ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಿದ್ದು, ಪ್ಲಾಸ್ಟಿಕ್ ವಾಟರ್ ಬಾಟಲ್ ಕುಡಿಯುವ ನೀರು ಸುರಕ್ಷಿತವಾ ಎಂಬ ವರದಿ ಆಹಾರ ಇಲಾಖೆಯ ಕೈ ಸೇರಲಿದೆ. ಈ ವಾರದಲ್ಲಿ ವರದಿ ದೊರೆಯುವ ನಿರೀಕ್ಷೆಇದೆ. ಒಟ್ಟಿನಲ್ಲಿ ಕುಡಿಯು ನೀರು ಸುರಕ್ಷಿತವಾ ಎಂಬ ಅನುಮಾನ ಈಗ ಜನರನ್ನು ಕಾಡುವುದಕ್ಕೆ ಶುರುವಾಗಿದ್ದು, ವರದಿ ಬಂದ ಬಳಿಕ ಕಳಪೆ ಗುಣಮಟ್ಟದ ನೀರು ಹಾಗೂ ಅದರ ಬಾಟಲಿಗಳಿಗೆ ಬ್ರೇಕ್ ಹಾಕಲು ಆಹಾರ ಇಲಾಖೆ ಯೋಜನೆ ರೂಪಿಸಲಿದೆ.
0 Comments