Ticker

6/recent/ticker-posts

Ad Code

Responsive Advertisement

*ಭಾರತದಲ್ಲಿ ದಾಖಲೆ ಸಂಖ್ಯೆಯಲ್ಲಿ ಬೆಂಜ್ ಕಾರುಗಳ ಮಾರಾಟ; 20 ಹೊಸ ಮಳಿಗೆ ತೆರೆಯಲು ಕಂಪನಿ ನಿರ್ಧಾರ

ವಿಶ್ವದ ಮೂರನೇ ಅತಿದೊಡ್ಡ ಕಾರು ತಯಾರಕ ಸಂಸ್ಥೆಯಾದ ಜರ್ಮನಿ ಮೂಲದ ಮರ್ಸಿಡೆಸ್ ಬೆಂಜ್ ಭಾರತದಲ್ಲಿ 2024ರಲ್ಲಿ ಭರ್ಜರಿ ಕಾರು ಮಾರಾಟ ಕಂಡಿದೆ. ವರದಿಯೊಂದರ ಪ್ರಕಾರ 2024ರ ಕ್ಯಾಲಂಡರ್ ವರ್ಷದಲ್ಲಿ (ಜನವರಿಯಿಂದ ಡಿಸೆಂಬರ್​ವರೆಗೆ) ಅದರ 19,565 ಕಾರುಗಳು ಮಾರಾಟವಾಗಿವೆ. ಮೂರು ದಶಕಗಳ ಹಿಂದೆ ಭಾರತದ ಮಾರುಕಟ್ಟೆ ಪ್ರವೇಶಿಸಿದ್ದ ಮರ್ಸಿಡೆಸ್ ಬೆಂಜ್ ಸಂಸ್ಥೆ ಯಾವ ವರ್ಷವೂ ಇಷ್ಟು ಪ್ರಮಾಣದಲ್ಲಿ ಕಾರು ಮಾರಾಟ ಮಾಡಿದ್ದಿಲ್ಲ. 2023ಕ್ಕೆ ಹೋಲಿಸಿದರೆ 2024ರಲ್ಲಿ ಶೇ. 12.4ರಷ್ಟು ಹೆಚ್ಚು ಕಾರುಗಳ ಮಾರಾಟವಾಗಿದೆ. 2024ರ ದ್ವಿತೀಯಾರ್ಧದಲ್ಲಿ ಶೇ. 16ರಷ್ಟು ಹೆಚ್ಚು ಕಾರು ಸೇಲ್ ಆಗಿವೆ. ಲಕ್ಷುರಿ ಕಾರುಗಳನ್ನು ತಯಾರಿಸುವ ಮರ್ಸಿಡೆಸ್ ಬೆಂಜ್ 2024ರಲ್ಲಿ 14 ಹೊಸ ಉತ್ಪನ್ನಗಳನ್ನು ಪರಿಚಯಿಸಿತ್ತು. ಅದರ ಟಾಪ್ ಎಂಡ್ ಮಾಡಲ್​ಗಳು ಕಳೆದ ವರ್ಷ ಅತಿಹೆಚ್ಚು ಮಾರಾಟ ಹೆಚ್ಚಳ ಕಂಡಿದೆ. ಹಿಂದಿನ ವರ್ಷದಕ್ಕೆ ಹೋಲಿಸಿದರೆ ಮರ್ಸಿಡೆಜ್ ಬೆಂಜ್​ನ ಟಾಪ್ ಎಂಡ್ ಕಾರುಗಳ ಮಾರಾಟದಲ್ಲಿ ಶೇ. 30ರಷ್ಟು ಹೆಚ್ಚಳವಾಗಿದೆ. ಸೇಲ್ ಆಗಿರುವ ಅದರ ಪ್ರತೀ ನಾಲ್ಕು ಕಾರಲ್ಲಿ ಒಂದು ಟಾಪ್ ಎಂಡ್ ಮಾಡಲ್ ಇರುವುದು ಗಮನಾರ್ಹ 1994ರಿಂದ ಈಚೆಗೆ ಮರ್ಸಿಡೆಜ್ ಬೆಂಜ್ ಭಾರತದಲ್ಲಿ ಮಾರಿರುವ ಕಾರುಗಳ ಸಂಖ್ಯೆ ಎರಡು ಲಕ್ಷ ಗಡಿ ಮುಟ್ಟಿದೆ. ಇದರಲ್ಲಿ ಅರ್ಧದಷ್ಟು ಭಾಗವು ಕಳೆದ 6 ವರ್ಷದಲ್ಲೇ ಸೇಲ್ ಆಗಿದೆ. ಮೊದಲ 50,000 ಕಾರುಗಳನ್ನು ಮಾರಲು ಅದಕ್ಕೆ 20 ವರ್ಷ ಬೇಕಾಗಿತ್ತು. ಮುಂದಿನ 50,000 ವಾಹನಗಳು ಐದು ವರ್ಷದಲ್ಲಿ ಮಾರಾಟವಾಗಿದ್ದವು. ಕಳೆದ ಒಂದು ದಶಕದಲ್ಲಿ ಒಂದೂವರೆ ಲಕ್ಷ ಬೆಂಜ್ ವಾಹನಗಳು ಭಾರತದಲ್ಲಿ ಸೇಲ್ ಆಗಿವೆ.

Post a Comment

0 Comments