Ticker

6/recent/ticker-posts

Ad Code

Responsive Advertisement

*ಯತ್ನಾಳ್​ ಆಯ್ತು ಈಗ ದಿಲ್ಲಿಯಿಂದ ಬರುತ್ತಲ್ಲೇ ವಿಜಯೇಂದ್ರ ವಿರುದ್ಧ ಜಾರಕಿಹೊಳಿ ವಾಗ್ದಾಳಿ


*ಬೆಳಗಾವಿ:* ಬಿಜೆಪಿ ಪಾಳಯದ ಬಣ ಬಡಿದಾಟ ಸದ್ಯ ದೆಹಲಿ ಅಂಗಳದಲ್ಲಿದೆ. ನಿನ್ನೆ ಶಿಸ್ತು ಸಮಿತಿ ಮುಂದೆ ಹಾಜರಾಗಿದ್ದ ಶಾಸಕ ಯತ್ನಾಳ್‌ಗೆ, ಹೈಕಮಾಂಡ್ ಖಡಕ್ ಆಗಿಯೇ ಸೂಚನೆ ನೀಡಿದೆ. ಪಕ್ಷದ ಸಂಘಟನೆಗಾಗಿ ಕೆಲಸ ಮಾಡಿ. ನಿಮಗೆ ಭವಿಷ್ಯ ಇದೆ. ಶಾಂತ ಸ್ವಭಾವದಿಂದ ವರ್ತಿಸುವಂತೆ ತಿಳಿಹೇಳಿದೆ. ಆದರೆ ಈ ಮಧ್ಯೆ ದೆಹಲಿಯಿಂದ ಆಗಮಿಸುತ್ತಿದ್ದಂತೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ವಿರುದ್ಧ ಶಾಸಕ ರಮೇಶ್ ಜಾರಕಿಹೊಳಿ‌ ವಾಗ್ದಾಳಿ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಿಜಯೇಂದ್ರಗೆ ಹುಡುಗಾಟಿಕೆ ಬುದ್ಧಿಯಿದೆ, ಸಣ್ಣ ಹುಡುಗ ಇದ್ದಾನೆ. ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ಬಿ.ವೈ.ವಿಜಯೇಂದ್ರ ಲಾಯಕ್ ಇಲ್ಲ. ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಡಬೇಕೆಂದು ಹೇಳಿದ್ದೇವೆ. ಯಡಿಯೂರಪ್ಪನವರು ಹೋರಾಟ ಮಾಡಿ ಆ ಸ್ಥಾನಕ್ಕೆ ತಲುಪಿದ್ದರು. ಆದರೆ ಯಡಿಯೂರಪ್ಪ ಮಗನಾಗಿ ಆ ಸ್ಥಾನಕ್ಕೆ ತಲುಪಿ ವ್ಯರ್ಥವಾಗುತ್ತಿದ್ದಾರೆ. ಈಗ ಅಧ್ಯಕ್ಷ ಸ್ಥಾನ ತ್ಯಜಿಸಿ, ಅನುಭವ ಆದ್ಮೇಲೆ ಅಧ್ಯಕ್ಷರಾದರೆ ಸೂಕ್ತ ಎಂದು ಕಿಡಿಕಾರಿದ್ದಾರೆ. ವಿಜಯೇಂದ್ರ ಬಾಯಿಬಿಟ್ಟರೆ ಬರೀ ಸುಳ್ಳು ಹೇಳುತ್ತಾರೆ. ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಳಿಕ ಗಂಭೀರವಾಗಿ ಕೆಲಸ ಮಾಡಬೇಕು. ಆದರೆ ಬಿವೈ ವಿಜಯೇಂದ್ರ ಬಹಳ ಹತಾಶೆ ಭಾವನೆಯಿಂದ ಅಧ್ಯಕ್ಷ ಸ್ಥಾನ ನಡೆಸುತ್ತಿದ್ದಾನೆ. ವಕ್ಫ್ ವಿರುದ್ಧ ಹೋರಾಟಕ್ಕೆ ನಾವು ಬಹಳಷ್ಟು ಮನವಿ ಮಾಡಿದ್ದೆವು ಎಂದು ಹೇಳಿದ್ದಾರೆ. ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಲಾಯಕ್ ಇಲ್ಲಾ ಅಂತಾ ಪದೇ ಪದೇ ಹೇಳುತ್ತೇವೆ. ಹೈಕಮಾಂಡ್​ಗೂ ಮನವರಿಕೆ ಆಗಿದೆ. ಯಾವುದೇ ಟೈಮ್​ನಲ್ಲಿ ಏನೋ ತಿಳಿದು ಮಾಡಿದ್ದಾರೆ. ಮಾಡಿದ ಬಳಿಕ ಅವನ ನಡುವಳಿಕೆ ತಿಳ್ಸಿಕೊಟ್ಟಿದ್ದೇವೆ. ಮುಂದೆ ಏನು ಮಾಡ್ತಾರೆ ನೋಡೋಣ. ಅಧ್ಯಕ್ಷರ ಬದಲಾವಣೆ ಬಗ್ಗೆ ಮುಂದಿನ ದಿನಗಳಲ್ಲಿ ನೋಡೋಣ‌ ಎಂದಿದ್ದಾರೆ.

Post a Comment

0 Comments