ಡೆಸ್ಕ್ : IAS ಅಧಿಕಾರಿಯಾಗಿರುವ ಅಶೋಕ್ ಖೇಮ್ಕಾ (IAS officer Ashok Khemka) ಅವರು ಪ್ರಾಮಾಣಿಕತೆ ಹಾಗೂ ವೃತ್ತಿ ನಿಷ್ಠೆಯ (Honesty and professional loyalty) ಕಾರಣದಿಂದ ತಮ್ಮ 33 ವರ್ಷದ ಸೇವಾವಧಿಯಲ್ಲಿ ಬರೋಬ್ಬರಿ 57 ಬಾರಿ ವರ್ಗಾವಣೆಗೊಂಡಿದ್ದಾರೆ (transfer) ಎಂದು ವರದಿಯಾಗಿದೆ.
ಕೆಲವೇ ತಿಂಗಳ ಸೇವಾವಧಿ (Term of service) ಹೊಂದಿರುವ ಅಶೋಕ್ ಖೇಮ್ಕಾ, ತಮ್ಮ ವೃತ್ತಿ ಜೀವನದಲ್ಲಿ ಪದೇ ಪದೇ (repeatedly) ವರ್ಗಾವಣೆ ಶಿಕ್ಷೆಗೊಳಗಾಗಿದ್ದಾರೆ. 33 ವರ್ಷದ ಸೇವಾವಧಿಯಲ್ಲಿ ಒಟ್ಟು 57 ಬಾರಿ ವರ್ಗಾವಣೆಗೊಂಡಿದ್ದಾರೆ. ಈಗ ಮತ್ತೊಮ್ಮೆ ತಮ್ಮ ಹುದ್ದೆಯಿಂದ ವರ್ಗಾವಣೆಗೊಳ್ಳುವ ಮೂಲಕ ಮತ್ತೆ ಸುದ್ದಿಯಲ್ಲಿದ್ದಾರೆ.
ಅಶೋಕ್ ಖೇಮ್ಕಾ ಅವರು ತಮ್ಮ ಸೇವಾವಧಿಯಲ್ಲಿ ಆರು ತಿಂಗಳಿಗೊಮ್ಮೆ ಟ್ರಾನ್ಸ್‌ಫರ್ ಆದ ಎರಡನೇ ಅಧಿಕಾರಿ (Second officer transferred in six months). ಮತ್ತೊಬ್ಬ ಐಎಎಸ್ ಅಧಿಕಾರಿಯಾದ ಪ್ರದೀಪ್ ಕಸ್ಮಿ, ತಮ್ಮ 35 ವರ್ಷಗಳ ಸೇವಾವಧಿಯಲ್ಲಿ ಒಟ್ಟು 71 ಸಲ ವರ್ಗಾವಣೆಯಾಗಿದ್ದರು. ತಮ್ಮ ವೈಯಕ್ತಿಕ ಕಾರಣಗಳಿಗಾಗಿ (personal reason) ಪ್ರದೀಪ್ ಕಸ್ಮಿ ಟ್ರಾನ್ಸ್‌ಫರ್ ಆಗುತ್ತಿದ್ದರು.
ಮೂಲತಃ ಪಶ್ಚಿಮ ಬಂಗಾಳ (West Bengal) ರಾಜ್ಯದವರಾದ ಅಶೋಕ್ ಖೇಮ್ಕಾ, ಐಎಎಸ್ ಅಧಿಕಾರಿಯಾಗಿ ಹರ್ಯಾಣದಲ್ಲಿ (Haryana) 33 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ಎಪ್ರಿಲ್ 30, 2025ರಲ್ಲಿ ಅವರು ತಮ್ಮ ಸೇವೆಯಿಂದ ನಿವೃತ್ತಿಯಾಗಲಿದ್ದಾರೆ (retired) ತಸವು ನಿವೃತ್ತಿಯಾಗಲೂ ಕೇವಲ 5 ತಿಂಗಳಿದ್ದರೂ ಸಹ, ಮತ್ತೆ ಸಾರಿಗೆ ಇಲಾಖೆಗೆ ವರ್ಗಾವಣೆಗೊಂಡಿದ್ದಾರೆ (Transfer to Transport Department).
ಇದಕ್ಕೂ ಮುನ್ನ ಅಶೋಕ್ ಖೇಮ್ಕಾ, ಮುದ್ರಣ ಮತ್ತು ಲೇಖನ ಸಾಮಗ್ರಿಗಳ ಇಲಾಖೆಯಲ್ಲಿ (Department of Printing and Stationery) ಕಾರ್ಯನಿರ್ವಹಿಸುತ್ತಿದ್ದರು. ಈಗ ಮತ್ತೆ ಒಂದು ದಶಕದ ಹಿಂದೆ ಸಾರಿಗೆ ಇಲಾಖೆಯಲ್ಲಿ ಹೊಂದಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (Additional Chief Secretary) ಹುದ್ದೆಗೆ ವಾಪಸ್ಸಾಗಿದ್ದಾರೆ.
ಐಎಎಸ್ ಅಧಿಕಾರಿ ಅಶೋಕ್ ಖೇಮ್ಕಾ ಅವರು, ಭ್ರಷ್ಟಾಚಾರದ ವಿರುದ್ಧ ದೃಢ ನಿಲುವು (firm stand against corruption) ಹೊಂದಿದ್ದಾರೆ. ಕಳೆದ ವರ್ಷ ಹರ್ಯಾಣ ಮುಖ್ಯಮಂತ್ರಿಗೆ ತಮ್ಮನ್ನು ವಿಚಕ್ಷಣಾ ಇಲಾಖೆಗೆ (Intelligence Department) ನೇಮಿಸುವಂತೆ ಪತ್ರ ಬರೆಯುವ ಮೂಲಕ, ಅಶೋಕ್ ಖೇಮ್ಕಾ ಮತ್ತೆ ಸುದ್ದಿಯಾಗಿದ್ದರು. ನಾನು ನನ್ನ ಉಳಿದ ಸೇವಾವಧಿಯನ್ನು ಭ್ರಷ್ಟಾಚಾರದ ವಿರುದ್ಧದ ಹೋರಾಟಕ್ಕೆ ಮುಡುಪಿಡಲು ಬಯಸುತ್ತೇನೆ ಎಂದು ಅವರು ಪತ್ರದಲ್ಲಿ ತಮ್ಮ ಬಯಕೆ ತಿಳಿಸಿದ್ದರು.
ಅಶೋಕ್ ಖೇಮ್ಕಾ ಅವರು ಖರಗ್ ಪುರ್ ಭಾರತೀಯ ತಂತ್ರಜ್ಞಾನ ಸಂಸ್ಥೆಯಿಂದ ಕಂಪ್ಯೂಟರ್ ಸೈನ್ಸ್ (Computer Science from Indian Institute of Technology) ನಲ್ಲಿ ಬಿಟೆಕ್ ಪದವಿ ಪಡೆದಿದ್ದಾರೆ. ಮುಂಬೈನ ಟಾಟಾ ಮೂಲಭೂತ ಸಂಶೋಧನಾ ಸಂಸ್ಥೆಯಿಂದ (Tata Institute of Fundamental Research) ಕಂಪ್ಯೂಟರ್ ಸೈನ್ಸ್ ನಲ್ಲಿ ಪಿಎಚ್ ಡಿ ಪದವಿ ಪಡೆದಿದ್ದಾರೆ.
ವ್ಯಾಪಾರ ಆಡಳಿತ ಮತ್ತು ಹಣಕಾಸು ವಿಷಯದಲ್ಲಿ ಎಂಬಿಎ ಪದವಿ ಹಾಗೂ ಇಂದಿರಾ ಗಾಂಧಿ ಮುಕ್ತ ವಿಶ್ವವಿದ್ಯಾಲಯದಿಂದ (Indira Gandhi Open University) ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಯನ್ನೂ (Master’s Degree in Economics) ಪಡೆದಿದ್ದಾರೆ.
0 Comments