Ticker

6/recent/ticker-posts

Ad Code

Responsive Advertisement

*‘ನನ್ನ ಮಗನಿದ್ದಂತೆ’; ವಿನೋದ್ ಕಾಂಬ್ಳಿ ನೆರವಿಗೆ 1983 ವಿಶ್ವಕಪ್ ವಿಜೇತ ತಂಡ ಸಿದ್ಧ ಎಂದ ಗವಾಸ್ಕರ್**


ಅನಾರೋಗ್ಯ ಹಾಗೂ ಆರ್ಥಿಕ ಸಂಕಷ್ಟದಿಂದ ಜೀವನ ನಿರ್ವಹಣೆಗೂ ಸಂಕಷ್ಟ ಪಡುತ್ತಿರುವ ಟೀಂ ಇಂಡಿಯಾದ ಮಾಜಿ ಆಟಗಾರ ಹಾಗೂ ಸಚಿನ್ ತೆಂಡೂಲ್ಕರ್ ಅವರ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅವರಿಗೆ ಎಲ್ಲಾ ರೀತಿಯ ನೆರವು ನೀಡಲು 1983 ರ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದ ತಂಡದ ಸದಸ್ಯರೆಲ್ಲರು ಸಿದ್ದರಿದ್ದೇವೆ ಎಂದು ಆ ತಂಡದ ಭಾಗವಾಗಿದ್ದ ಸುನೀಲ್ ಗವಾಸ್ಕರ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ. ವಾಸ್ತವವಾಗಿ ಕೆಲವು ದಿನಗಳ ಹಿಂದೆ ಕಪಿಲ್ ದೇವ್ ಕೂಡ ವಿನೋದ್ ಕಾಂಬ್ಳಿಗೆ ನೆರವು ನೀಡುವುದಾಗಿ ಹೇಳಿಕೊಂಡಿದ್ದರು. ಆದರೆ ನಾವು ನೆರವು ನೀಡಬೇಕೆಂದರೆ ವಿನೋದ್ ಮೊದಲು ರಿಹ್ಯಾಬ್ ಸೆಂಟರ್​ಗೆ ಸೇರಿ ಕುಡಿತದ ಚಟದಿಂದ ಹೊರಬರಬೇಕು ಎಂಬ ಷರತ್ತವನ್ನು ವಿಧಿಸಿದ್ದರು. ವಾಸ್ತವವಾಗಿ ಕೆಲವು ದಿನಗಳ ಹಿಂದೆ ಮುಂಬೈನ ಪ್ರಸಿದ್ಧ ಶಿವಾಜಿ ಪಾರ್ಕ್ ಮೈದಾನದಲ್ಲಿ ರಮಾಕಾಂತ್ ಅಚ್ರೇಕರ್ ಅವರ ಸ್ಮಾರಕವನ್ನು ಇತ್ತೀಚೆಗೆ ಅನಾವರಣಗೊಳಿಸಲಾಯಿತು. ಈ ಸಮಾರಂಭದಲ್ಲಿ ಸಚಿನ್ ತೆಂಡೂಲ್ಕರ್, ವಿನೋದ್ ಕಾಂಬ್ಳಿ ಸೇರಿದಂತೆ ರಮಾಕಾಂತ್ ಅವರ ಕೋಚಿಂಗ್‌ನಲ್ಲಿ ಬೆಳೆದಿದ್ದ ಪ್ರಸಿದ್ಧ ಕ್ರಿಕೆಟಿಗರು ಉಪಸ್ಥಿತರಿದ್ದರು. ಈ ವೇಳೆ ಸಚಿನ್ ತೆಂಡೂಲ್ಕರ್ ತಮ್ಮ ಬಾಲ್ಯದ ಗೆಳೆಯ ವಿನೋದ್ ಕಾಂಬ್ಳಿ ಅವರನ್ನು ಸಮಾರಂಭದಲ್ಲಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದರು. ಆ ಕ್ಷಣದಲ್ಲಿ ಕಾಂಬ್ಳಿಗೆ ಆರಂಭದಲ್ಲಿ ಸಚಿನ್​ರನ್ನು ಗುರುತಿಸಲು ಸಾಧ್ಯವಾಗಿರಲಿಲ್ಲ. ಅಲ್ಲೇ ಪಕ್ಕದಲ್ಲಿ ಕುಳಿತಿದ್ದವರು, ಅದು ಸಚಿನ್ ತೆಂಡೂಲ್ಕರ್ ಎಂದು ಹೇಳಿದ ಬಳಿಕ ಕಾಂಬ್ಳಿಗೆ ಗೆಳೆಯನನ್ನು ಪತ್ತೆಹಚ್ಚಲು ಸಾಧ್ಯವಾಗಿತ್ತು. ಇದಲ್ಲದೆ ಸಮಾರಂಭದಲ್ಲಿ ಮಾತನಾಡಿದ್ದ ಕಾಂಬ್ಳಿಗೆ ಸರಿಯಾಗಿ ಮಾತನಾಡಲು ಸಾಧ್ಯವಾಗಲಿಲ್ಲ. ಅವರು ಮಾತನಾಡಲು ಸಾಕಷ್ಟು ಕಷ್ಟಪಡಬೇಕಾಯಿತು. ಅಲ್ಲದೆ ಕಳೆದ ಆಗಸ್ಟ್​ನಲ್ಲಿ ಕಾಂಬ್ಳಿ ಅವರ ಶಾಕಿಂಗ್ ವಿಡಿಯೋವೊಂದು ಸಾಕಷ್ಟು ವೈರಲ್ ಆಗಿತ್ತು. ಅದರಲ್ಲಿ ಕಾಂಬ್ಳಿ ಒಬ್ಬರೇ ಸ್ವಾತಂತ್ರವಾಗಿ ನಡೆಯಲು ಸಾಧ್ಯವಾಗದಂತ ಸ್ಥಿತಿಗೆ ತಲುಪಿದ್ದರು. ಕಾಂಬ್ಳಿಗೆ ಬೇರೊಬ್ಬರ ಸಹಾಯವಿಲ್ಲದೆ ನಡೆಯಲು ಸಾಧ್ಯವಾಗುತ್ತಿಲ್ಲ. ಕಾಂಬ್ಳಿ ಅವರ ಈ ಸೋಚನೀಯ ಸ್ಥಿತಿಯನ್ನು ನೋಡಿದ್ದ ಮಾಧ್ಯಮಗಳು ಹಾಗೂ ಮಾಜಿ ಕ್ರಿಕೆಟಿಗರು ಮರುಕ ಪಟ್ಟಿದ್ದರು.

Post a Comment

0 Comments