ಭಾರತದ ಒಂದು ಶಾಲೆ ಈಗ ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಗೆ ಸೇರಿದೆ. ಇತ್ತೀಚೆಗೆ, HSBC ಚೀನಾ ಮತ್ತು ಹುರುನ್ ಶಿಕ್ಷಣವು ‘ 2025ರ ಅತ್ಯುತ್ತಮ ಶಾಲೆ’ ವರದಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಪಂಚದಾದ್ಯಂತದ ಅತ್ಯುತ್ತಮ ಶಾಲೆಗಳನ್ನು ಗುರಿತಿಸಲಾಗುತ್ತದೆ. ಅದರಲ್ಲಿ ಈ ವರ್ಷ ಭಾರತದ ಒಂದು ಶಾಲೆಯೂ ಸೇರಿರುವುದು ವಿಶೇಷ. ವಿಶ್ವದ ಅತ್ಯುತ್ತಮ ಶಾಲೆಗಳ ಪಟ್ಟಿಯಲ್ಲಿ ಗುರುತಿಸಿಕೊಂಡಿರುವ ಏಕೈಕ ಶಾಲೆ ಧೀರೂಭಾಯಿ ಅಂಬಾನಿ ಅಂತರರಾಷ್ಟ್ರೀಯ ಶಾಲೆ (DAIS). ಈ ಶಾಲೆ ನೀತಾ ಅಂಬಾನಿಯ ಒಡೆತನದಲ್ಲಿದ್ದು, US ಮತ್ತು UK ಯ ಹೊರಗಿನ ಉನ್ನತ ಶಾಲೆಗಳ ಪಟ್ಟಿಯಲ್ಲಿ 5 ನೇ ಸ್ಥಾನವನ್ನು ಮತ್ತು US ಮತ್ತು UK ಯ ಶಾಲೆಗಳನ್ನು ಸೇರಿಸಿದ ನಂತರ 77 ನೇ ಸ್ಥಾನವನ್ನು ಪಡೆದುಕೊಂಡಿದೆ.
ಈ ವರದಿಯಲ್ಲಿ ಒಟ್ಟು 122 ಹಗಲು ಶಾಲೆಗಳು, ಅಂದರೆ ಮಕ್ಕಳು ಹಗಲಿನ ವೇಳೆ ಅಧ್ಯಯನ ಮಾಡಲು ಹೋಗುವ ಶಾಲೆಗಳು ಸೇರಿವೆ. ಇವುಗಳಲ್ಲಿ ಅತಿ ಹೆಚ್ಚು ಅಂದರೆ 58 ಅಮೆರಿಕದ ಶಾಲೆಗಳಾಗಿವೆ. ಅದರ ನಂತರ, ಬ್ರಿಟನ್‌ನಿಂದ 47, ಚೀನಾದಿಂದ 9, ಸಿಂಗಾಪುರ ಮತ್ತು ಜಪಾನ್‌ನಿಂದ ತಲಾ 2 ಶಾಲೆಗಳ ಹೆಸರಿವೆ. ಕೆನಡಾ, ದಕ್ಷಿಣ ಕೊರಿಯಾ, ಭಾರತ ಮತ್ತು ಯುಎಇಯಿಂದ ತಲಾ ಒಂದು ಶಾಲೆ ಈ ಪಟ್ಟಿಯಲ್ಲಿ ಸ್ಥಾನ ಪಡೆದಿವೆ. ವಿಶ್ವದ ಟಾಪ್ 10 ಶಾಲೆಗಳ ಪಟ್ಟಿಯಲ್ಲಿ ಲಂಡನ್‌ನ ವೆಸ್ಟ್‌ಮಿನಿಸ್ಟರ್ ಶಾಲೆ ಮೊದಲ ಸ್ಥಾನದಲ್ಲಿದ್ದರೆ, ಸೇಂಟ್ ಪಾಲ್ಸ್ ಶಾಲೆ ಮತ್ತು ದಿ ಡಾಲ್ಟನ್ ಶಾಲೆ ನಂತರದ ಸ್ಥಾನದಲ್ಲಿವೆ. ವಿಶ್ವದ ಟಾಪ್ ಶಾಲೆಗಳಲ್ಲಿ ಶೇಕಡಾ 45 ರಷ್ಟು ಅಮೆರಿಕದಲ್ಲಿ ಮತ್ತು ಶೇಕಡಾ 40 ರಷ್ಟು ಬ್ರಿಟನ್‌ನಲ್ಲಿವೆ. ಚೀನಾ ಶೇಕಡಾ 9 ರೊಂದಿಗೆ ಮೂರನೇ ಸ್ಥಾನದಲ್ಲಿದೆ. ಸಮೀಕ್ಷೆಯಲ್ಲಿ ಸೇರಿಸಲಾದ ಶಾಲೆಗಳು 52 ನಗರಗಳಲ್ಲಿವೆ, ಅವುಗಳಲ್ಲಿ ಲಂಡನ್ ಮತ್ತು ನ್ಯೂಯಾರ್ಕ್ ಅಗ್ರಸ್ಥಾನದಲ್ಲಿವೆ, ನಂತರ ಬೋಸ್ಟನ್ ಮತ್ತು ವಾಷಿಂಗ್ಟನ್ ಡಿಸಿ ಇವೆ.
Yogesh shiruru
0 Comments