Ticker

6/recent/ticker-posts

Ad Code

Responsive Advertisement

ಕರಾವಳಿ ಅಭಿವೃದ್ಧಿ ಪ್ರಧಿಕಾರದ ಅಧ್ಯಕ್ಷ ಸ್ಥಾನವನ್ನು ಮೊಗವೀರ ಸಮಾಜಕ್ಕೆ ನೀಡುವಂತೆ ಕಿರಣ್ ಕುಮಾರ್ ಉದ್ಯಾವರ ಮನವಿ.....

ಮೊಗವೀರ ಸಮಾಜವು ಕರಾವಳಿ ಭಾಗವಾದ ದಕ್ಷಿಣ ಕನ್ನಡ ಉಡುಪಿ ಜಿಲ್ಲೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಅತೀ ಹೆಚ್ಚು ಜನಸಂಖ್ಯೆಯನ್ನು ಹೊಂದಿದೆ. ಹಿಂದಿನಿಂದಲೂ ಮೊಗವೀರ ಸಮಾಜವು ಯಾವುದರ ಆಸೆ ,ಅಧಿಕಾರ, ಪಟ್ಟಕ್ಕಾಗಿ ಭೇಡಿಕೆಯನ್ನಿಡದೆ ಕಾಂಗ್ರೆಸ್ ಪಕ್ಷದ ಪರವಾಗಿ‌ ಕೆಲಸ ಮಾಡುತ್ತ ಬಂದಿದೆ...ಪಕ್ಷದಿಂದ ಯಾವುದೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದರು ಕೂಡ ಪಕ್ಷವೆ ಮುಖ್ಯವೆನ್ನುವ ಧ್ಯೇಯ ದೊಂದಿಗೆ ಪಕ್ಷದ ಪರವಾಗಿ ಸಮಾಜವು ಭದ್ರವಾಗಿ ನಿಂತಿದೆ.ಅಲ್ಲದೆ ಪಕ್ಷವು ಸಮಾಜದ ಆಗುಹೋಗುಗಳಿಗೆ ನೋವುಗಳಿಗೆ ಸ್ಪಂದಿಸುತ್ತ ಬಂದಿರುವುದು ಎಲ್ಲರಿಗೂ ತಿಳಿದ ವಿಷಯ, ಇತ್ತಿಚಿನ ದಿನಗಳಲ್ಲಿ  ಪಕ್ಷಕ್ಕಾಗಿ ದುಡಿದ  ಮೊಗವೀರ  ಸಮಾಜದ ಹಿರಿಯ ನಾಯಕರನ್ನು ಗುರುತಿಸುವಲ್ಲಿ ವಿಫಲವಾಗಿದೆ.ಕರಾವಳಿ‌ ಭಾಗದಲ್ಲಿ ಪಕ್ಷಕ್ಕಾಗಿ ದುಡಿದ ಹಿರಿಯ ನಾಯಕರುಗಳಾದ ಶ್ರೀ‌ ಮಹಾಬಲ‌ ಕುಂದರ್, ಶ್ರೀ ಕೇಶವ ಕೊಟ್ಯಾನ್ , ಶ್ರೀ ದಿವಾಕರ ಕುಂದರ್,ಶ್ರೀ ಹಿರಿಯಣ್ಣ ಚಾತ್ರಬೆಟ್ಟು , ಶ್ರೀ ಮದನ್ ಕುಮಾರ್, ಶ್ರೀ ಚೇತನ್ ಬೆಂಗ್ರೆ, ಇವರಲ್ಲಿ ಯಾರಿಗೊಬ್ಬರಿಗಾದರು  ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ನೀಡಿದರೆ ಮೊಗವೀರ ಸಮಾಜಕ್ಕೆ ನ್ಯಾಯ ದೊರಕಿದಂತಾಗುತ್ತದೆ, ಎಂದು ಕಿರಣ್ ಕುಮಾರ್ ಉದ್ಯಾವರ ಆಗ್ರಹಿಸಿದ್ದಾರೆ.

Post a Comment

0 Comments