ಬ್ರೈನ್ ಟ್ಯೂಮರ್ ಎಂಬ ಕಾಯಿಲೆಯ ಬಗ್ಗೆ ಹೆಚ್ಚಿನವರಿಗೆ ತಿಳಿದಿರುತ್ತದೆ. ಇದೊಂದು ಗಂಭೀರ ಕಾಯಿಲೆಯಾಗಿದ್ದು, ಮೆದುಳಿನ ಭಾಗದಲ್ಲಿ ಗಡ್ಡೆ ಕಾಣಿಸಿಕೊಳ್ಳುವುದನ್ನು ವೈದ್ಯಕೀಯ ಭಾಷೆಯಲ್ಲಿ ಬ್ರೈನ್ ಟ್ಯೂಮರ್ ಎಂದು ಕರೆಯುತ್ತಾರೆ. ಈ ಸಮಸ್ಯೆ ಚೆನ್ನಾಗಿ ಆರೋಗ್ಯವಾಗಿದ್ದ ವ್ಯಕ್ತಿಗೆ ಇದ್ದಕ್ಕಿದ್ದಂತೆ ಕಂಡುಬರಬಹುದು. ಅದಕ್ಕಾಗಿಯೇ ಈ ಕಾಯಿಲೆಯ ಬಗ್ಗೆ ಜನರಲ್ಲಿ ಹೆಚ್ಚಿನ ಅರಿವು ಮೂಡಿಸುವ ಸಲುವಾಗಿ ಪ್ರತಿ ವರ್ಷ ಜೂನ್ 8 ರಂದು ವಿಶ್ವ ಆರೋಗ್ಯ ಸಂಸ್ಥೆಯು ವಿಶ್ವ ಬ್ರೈನ್ ಟ್ಯೂಮರ್ ದಿನವನ್ನು ಆಚರಿಸುತ್ತದೆ. ಹಾಗಾದರೆ ಈ ರೀತಿ ಸಮಸ್ಯೆ ಕಂಡುಬಂದಾಗ ಆತನಲ್ಲಿ ಯಾವ ರೀತಿಯ ಬದಲಾವಣೆಗಳು ಕಂಡುಬರುತ್ತದೆ? ಮೊದಲಿನಂತೆ ಇರಲು ಆ ವ್ಯಕ್ತಿಗೆ ಏಕೆ ಸಾಧ್ಯವಾಗುವುದಿಲ್ಲ ಎಂಬಂತಹ ವಿಷಯಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ. ಒಮ್ಮೆಲೇ ತಲೆನೋವು ಬರಬಹುದು. ಅದರಲ್ಲಿಯೂ ಬೆಳಗಿನ ಸಮಯದಲ್ಲಿ ತಲೆನೋವು ಸಾಮಾನ್ಯವಾಗಿರುತ್ತದೆ. ಅಲ್ಲದೆ ತಲೆನೋವು ಆಗಾಗ ಹೆಚ್ಚಾಗುವುದು, ಕಡಿಮೆಯಾಗುವುದು ಹೀಗೆ ಆಗುತ್ತಿರಬಹುದು. ಕೆಲವರಲ್ಲಿ ದಿನ ಕಳೆದಂತೆ ತಲೆನೋವು ಹೆಚ್ಚಾಗಬಹುದು.
ವಾಕರಿಕೆ ವಾಂತಿ ಕಂಡು ಬರಬಹುದು. ಕಣ್ಣಿನ ದೃಷ್ಟಿ, ಮಾತು ಮತ್ತು ಕೇಳಿಸಿಕೊಳ್ಳುವ ಪ್ರಕ್ರಿಯೆ ಬದಲಾಗಬಹುದು.
ನಡೆಯುವಾಗ ಬ್ಯಾಲೆನ್ಸ್ ಮಾಡಲು ಸಾಧ್ಯವಾಗದೇ ಇರಬಹುದು. ಯಾರ ಬಳಿಯಾದರೂ ಮಾತನಾಡಬೇಕಾದರೆ ಸರಿಯಾಗಿ ಗಮನ ಕೊಟ್ಟು ಮಾತನಾಡಲು ಆಗದೆ ಇರಬಹುದು.
ದಿನ ಕಳೆದಂತೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳಬಹುದು.
ನೆನಪಿನ ಶಕ್ತಿ ಕಡಿಮೆಯಾಗುತ್ತಾ ಹೋದಂತೆ ಎಲ್ಲಾ ವಿಷಯದಲ್ಲಿಯೂ ಗೊಂದಲ ಉಂಟಾಗಬಹುದು.
ಕೈ ಕಾಲುಗಳಲ್ಲಿ ಚುಚ್ಚಿದ ಅನುಭವ ಉಂಟಾಗುತ್ತದೆ. ದಿನ ಕಳೆದಂತೆ ಕೈ ಕಾಲುಗಳನ್ನು ಆಡಿಸುವುದು ಗೊತ್ತೇ ಆಗುವುದಿಲ್ಲ.
ವಿಪರೀತ ಸುಸ್ತು, ಕಿವಿ ಕೇಳಿಸದೇ ಇರುವುದು, ಪಿಡ್ಸ್ ಬರುವುದು, ಬಂಜೆತನ ಉಂಟಾಗಬಹುದು.
ಕಣ್ಣು ಮಂಜಾಗುವುದು, ದೃಷ್ಟಿ ಕಡಿಮೆಯಾಗುವುದು.ಬ್ರೈನ್ ಟ್ಯೂಮರ್ ಯಾರಲ್ಲಿ ಬೇಕಾದರೂ ಕಂಡುಬರಬಹುದು ಇದಕ್ಕೆ ವಯಸ್ಸಿನ ಮಿತಿ ಇರುವುದಿಲ್ಲ. ಇದು ಅನುವಂಶಿಯ ಕಾಯಿಲೆಯಲ್ಲ. ಆದರೂ ಕೂಡ ಕುಟುಂಬದಲ್ಲಿ ಕಂಡು ಬರಬಹುದಾಗಿದೆ. ಈ ಕಾಯಿಲೆ ಹೆಚ್ಚಿನ ಸಮಯದಲ್ಲಿ ನಿರಂತರವಾಗಿ ಯಾವುದಾದರೂ ರೇಡಿಯೇಶನ್ ಪ್ರಕ್ರಿಯೆಗೆ ಒಳಗಾಗಿದ್ದರೆ, ಹೆಚ್ಚಾಗಿ ಸೆಲ್ ಫೋನ್ ಬಳಸುವುದರಿಂದ ಅಥವಾ ಯಾವುದಾದರೂ ರಾಸಾಯನಿಕಗಳ ನಿರಂತರ ಪ್ರಭಾವದಿಂದ ಈ ಸಮಸ್ಯೆ ಕಂಡು ಬರಬಹುದು.
0 Comments