Ticker

6/recent/ticker-posts

Ad Code

Responsive Advertisement

*ಕಿಲ್ಲರ್‌ ಲೇಡಿಯಿಂದ ಇರಾನ್‌ ನಾಶ – ಇಸ್ರೇಲ್‌ ನಿಖರ ದಾಳಿ ಹಿಂದಿದ್ದಾಳೆ ಸುಂದರಿ!*****


 *ಟೆಲ್‌ ಅವಿವ್‌:* ಪುಟ್ಟ ದೇಶ ಇಸ್ರೇಲ್‌  ಇರಾನ್‌ ಮೇಲೆ ಇಷ್ಟೊಂದು ನಿಖರವಾಗಿ ದಾಳಿ ಮಾಡಿದರ ಹಿಂದೆ ಮೊಸಾದ್‌ (Mossad) ಮಹಿಳಾ ಗೂಢಚಾರಿಣಿ ಕೆಲಸ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.ಫ್ರಾನ್ಸ್‌ ಮೂಲದ ಕ್ಯಾಥರೀನ್ ಪೆರೆಜ್ ಶಕ್ಡಮ್ (Catherine Perez Shakdam) ಎಂಬಾಕೆ ಎರಡು ವರ್ಷದ ಹಿಂದೆ ಮೊಸಾದ್‌ನಿಂದ ತರಬೇತಿ ಪಡೆದು ರಹಸ್ಯವಾಗಿ ಇರಾನ್‌ ಪ್ರವೇಶಿಸಿದ್ದಳು. ನೋಡಲು ಸುಂದರವಾಗಿದ್ದ ಈಕೆ ಮೂಲತ: ಯಹೂದಿ. ಕ್ಯಾಥರೀನ್ ಶಿಯಾ ಇಸ್ಲಾಂಗೆ ಮತಾಂತರಗೊಂಡು ನಿಧಾನವಾಗಿ ಇರಾನಿನ ಉನ್ನತ ಅಧಿಕಾರಿಗಳು ಮತ್ತು ಅವರ ಕುಟುಂಬಗಳಿಗೆ ಹತ್ತಿರವಾಗಿದ್ದಳು.ನಾನು ಇಸ್ಲಾಂ ಧರ್ಮದ ಬಗ್ಗೆ ಮತ್ತು ಇರಾನ್‌ ದೇಶದ ಆಡಳಿತದ ಬಗ್ಗೆ ಒಲವು ಹೊಂದಿದ್ದೇನೆ ಎಂದು ಹೇಳಿ ಇಸ್ಲಾ ಧರ್ಮ ನಿಯಮಗಳನ್ನು ಚಾಚು ತಪ್ಪದೇ ಪಾಲಿಸುತ್ತಿದ್ದಳು. ಮತಾಂತರಗೊಂಡ ಬಳಿಕ ಇರಾನ್‌ ರಾಜಧಾನಿ ಟೆಹ್ರಾನ್‌ನಲ್ಲಿದ್ದ ಈಕೆ ಸರ್ಕಾರಿ ಅಧಿಕಾರಿಗಳ ಪತ್ನಿಯರನ್ನು ಭೇಟಿಯಾಗಿ ಮಾತನಾಡಲು ಆರಂಭಿಸಿದ್ದಳು. ನಂತರದ ದಿನಗಳಲ್ಲಿ ಈಕೆ ಎಷ್ಟು ವಿಶ್ವಾಸ ಗಳಿಸಿದ್ದಳು ಎಂದರೆ ಸೇನಾ ನಾಯಕರ ಮನೆಗೆ ನಿಯಮಿತ ಹೋಗುವ ಮಟ್ಟಕ್ಕೆ ಆಪ್ತತೆ ಬೆಳೆದಿತ್ತು. ಈಕೆಯ ಬರಹಗಳು ನಿಯಮಿತವಾಗಿ ಪ್ರೆಸ್ ಟಿವಿ, ಟೆಹ್ರಾನ್ ಟೈಮ್ಸ್ ಮತ್ತು ಖಮೇನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಸಹ ಕಾಣಿಸಿಕೊಳ್ಳುತ್ತಿದ್ದವು. ಬರಹಗಾರ್ತಿ, ಪತ್ರಕರ್ತೆ ಮತ್ತು ಚಿಂತಕಿಯಾಗಿ ಪ್ರವೇಶಿಸಿದ್ದ ಕ್ಯಾಥರೀನ್ ಲೇಖನದ ಮೂಲಕ ಇರಾನಿನ ಸರ್ವೋಚ್ಚ ನಾಯಕ ಅಲಿ ಖಮೇನಿ ನಿರ್ಧಾರವನ್ನು ಸಮರ್ಥಿಸಿಕೊಳ್ಳುತ್ತಿದ್ದಳು.ಸೇನೆಯಲ್ಲಿರುವ ಉನ್ನತ ನಾಯಕರ ಮನೆಗೆ ಅಷ್ಟು ಸುಲಭವಾಗಿ ಯಾರನ್ನು ಬಿಡುವುದಿಲ್ಲ. ಆದರೆ ಬಿಗಿ ಭದ್ರತೆ ಕಲ್ಪಿಸಿದ್ದ ಈ ಮನೆಗೆ ಕ್ಯಾಥರೀನ್ ಬಹಳ ಸಲೀಸಾಗಿ ಹೋಗುತ್ತಿದ್ದಳು. ಮನೆಗೆ ಭೇಟಿ ನೀಡುವುದರ ಜೊತೆಗೆ ಆಕೆ ಉನ್ನತ ಕಮಾಂಡರ್‌ಗಳ ಬಗ್ಗೆ ಗುಪ್ತಚರ ಮಾಹಿತಿಯನ್ನು ಸದ್ದಿಲ್ಲದೆ ಸಂಗ್ರಹಿಸುತ್ತಿದ್ದಳು. ಸೇನಾ ನಾಯಕರ ಮನೆ ಮಾತ್ರವಲ್ಲ ಸಾಮಾನ್ಯವಾಗಿ ಯಾರಿಗೂ ಪ್ರವೇಶ ಇಲ್ಲದ ಅಥವಾ ಕಠಿಣ ಪರಿಶೀಲನೆಯ ನಂತರ ಪ್ರವೇಶಿಸಬಹುದಾಗಿದ್ದ ಖಾಸಗಿ ಸ್ಥಳಗಳಿಗೆ ಈಕೆ ಬಹಳ ಸಲೀಸಲಾಗಿ ತೆರಳುತ್ತಿದ್ದಳು.

Post a Comment

0 Comments