Ticker

6/recent/ticker-posts

Ad Code

Responsive Advertisement

*ಐಐಟಿ ಡೆಲ್ಲಿ ಭಾರತದ ನಂ. 1 ಯೂನಿವರ್ಸಿಟಿ; ಎಂಐಟಿ ವಿಶ್ವದಲ್ಲೇ ಬೆಸ್ಟ್***


 *ನವದೆಹಲಿ* : ಈ ವರ್ಷದ ಸಾಲಿನ ಕ್ಯುಎಸ್ ವರ್​ಲ್ಡ್ ಯೂನಿವರ್ಸಿಟಿಗಳ ಪಟ್ಟಿಯನ್ನು ಪ್ರಕಟಿಸಲಾಗಿದೆ. ನೂರಕ್ಕೂ ಹೆಚ್ಚು ದೇಶಗಳಿಂದ 1,500ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಈ ಪಟ್ಟಿಯಲ್ಲಿದ್ದು, ಅಮೆರಿಕದ ಮಸಾಚುಸೆಟ್ಸ್ ಇನ್ಸ್​​ಟಿಟ್ಯೂಟ್ ಆಫ್ ಟೆಕ್ನಾಲಜಿ (ಎಂಐಟಿ) ತನ್ನ ಅಗ್ರಸ್ಥಾನ ಉಳಿಸಿಕೊಂಡಿದೆ. ಭಾರತದಲ್ಲಿ ಐಐಟಿ ದೆಹಲಿ  ಅಗ್ರಸ್ಥಾನಕ್ಕೇರಿದೆ. ಈ ಪಟ್ಟಿಯಲ್ಲಿ ಅನೇಕ ಭಾರತೀಯ ಯೂನಿರ್ಸಿಟಿಗಳು ಮೊದಲ ಬಾರಿಗೆ ಸ್ಥಾನ ಪಡೆದಿವೆ. ಈ ಕ್ಯುಎಸ್ ರ್ಯಾಂಕಿಂಗ್ ಪಟ್ಟಿಯಲ್ಲಿ ಬರೋಬ್ಬರಿ 54 ಭಾರತೀಯ ಶಿಕ್ಷಣ ಸಂಸ್ಥೆಗಳಿವೆ. ಐಐಟಿ ಡೆಲ್ಲಿ ಎರಡು ವರ್ಷಗಳ ಹಿಂದೆ ಹತ್ತಿರ ಹತ್ತಿರ 200ನೇ ಸ್ಥಾನದ ಸಮೀಪದಲ್ಲಿತ್ತು. ಎರಡು ವರ್ಷದಲ್ಲಿ 70ಕ್ಕೂ ಹೆಚ್ಚು ಸ್ಥಾನ ಮೇಲೇರಿದೆ. 2024-25ರ ಪಟ್ಟಿಯಲ್ಲಿ ಐಐಟಿ ದೆಹಲಿ 150ನೇ ಸ್ಥಾನದಲ್ಲಿತ್ತು. ಈಗ 2025-26ರ ಪಟ್ಟಿಯಲ್ಲಿ 123ನೇ ಸ್ಥಾನಕ್ಕೇರಿದೆ.
ಭಾರತೀಯ ಯೂನಿವರ್ಸಿಟಿಗಳ ಪೈಕಿ ಐಐಟಿ ಡೆಲ್ಲಿ ನಂತರದ ಸ್ಥಾನ ಐಐಟಿ ಬಾಂಬೆ ಮತ್ತು ಐಐಟಿ ಮದ್ರಾಸ್​ನದ್ದಾಗಿದೆ. ಅವು ಕ್ರಮವಾಗಿ 129 ಮತ್ತು 180ನೇ ರ್ಯಾಂಕಿಂಗ್ ಹೊಂದಿವೆ. ಕಳೆದ ಬಾರಿಯ ಪಟ್ಟಿಯಲ್ಲಿ ಐಐಟಿ ಬಾಂಬೆ ಭಾರತೀಯ ಯೂನಿವರ್ಸಿಟಿಗಳಲ್ಲಿ ನಂಬರ್ ಒನ್ ಎನಿಸಿತ್ತು. ಈ ಟಾಪ್ 10 ಕ್ಯುಎಸ್ ಪಟ್ಟಿಯಲ್ಲಿ ಏಷ್ಯಾದ ಒಂದೇ ಯೂನಿವರ್ಸಿಟಿ ಇರುವುದು. ಅಮೆರಿಕ ಮತ್ತು ಇಂಗ್ಲೆಂಡ್ ಆಚೆ ಎರಡು ಯೂನಿವರ್ಸಿಟಿಗಳಿಗೆ. ಸಿಂಗಾಪುರ ಬಳಿಕ ಸ್ವಿಟ್ಜರ್​​ಲೆಂಡ್​​ನಲ್ಲಿ ಒಂದು ಯೂನಿವರ್ಸಿಟಿ ಮಾತ್ರವೇ ಟಾಪ್-10ನಲ್ಲಿ ಇರುವುದು.

Post a Comment

0 Comments