*ಮಂಗಳೂರು* : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷಕ್ಕೆ ಬ್ರೇಕ್ ಹಾಕಲು ಮುಂದಾದ ಪೊಲೀಸರು ಮಧ್ಯರಾತ್ರಿ ಹಿಂದೂ ಮುಖಂಡರ ಮನೆಗಳ ಕದ ತಟ್ಟಿದ್ರು. ಈ ವಿಚಾರ ಇದೀಗ ಪೊಲೀಸರನ್ನೇ ಸಂಕಷ್ಟಕ್ಕೆ ಸಿಲುಕಿಸಿದೆ. ದಕ್ಷಿಣ ಕನ್ನಡ ಎಸ್ಪಿ ಅರುಣ್ ಅವರಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ. ಸೂಕ್ತ ದಾಖಲೆ ಸಲ್ಲಿಸುವಂತೆ ಕೋರ್ಟ್ ತಾಕೀತು ಮಾಡಿದೆ.
ಮಿಡ್ ನೈಟ್ ರೈಡ್ ತಲೆಬಿಸಿ
ಮಿಡ್ ನೈಟ್ ರೇಡ್ ಪ್ರಕರಣ ದಕ್ಷಿಣ ಕನ್ನಡ ಎಸ್ಪಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಮಂಗಳೂರಿನ ಹಿರಿಯ ಅರ್.ಎಸ್.ಎಸ್ ಮುಖಂಡರ ಮನೆಗಳ ಮೇಲೆ ಪೊಲೀಸರು ಮಧ್ಯರಾತ್ರಿಗಳಲ್ಲಿ ತೆರಳಿ ಪರಿಶೀಲನೆ ಮಾಡಿದ್ರು. ಪೊಲೀಸರ ಈ ಕ್ರಮ ಖಂಡಿಸಿ ಹಿಂದೂಪರ ಮುಖಂಡರು ಪ್ರತಿಭಟನೆ ನಡೆಸಿದ ದೂರ ಸಹ ನೀಡಿದ್ರು.
ಪೊಲೀಸರಿಗೆ ಹೈಕೋರ್ಟ್ ತಾಕೀತು
ಈ ಸಂಬಂಧ ದಕ್ಷಿಣ ಕನ್ನಡ ಎಸ್ಪಿಗೆ ಕರ್ನಾಟಕ ಹೈಕೋರ್ಟ್ ನೋಟಿಸ್ ನೀಡಿದೆ. ಪ್ರಕರಣಕ್ಕೆ ಸಂಬಂಧಿಸಿ ಸೂಕ್ತ ದಾಖಲೆ ಸಲ್ಲಿಸಿ, ಕಾನೂನು ಹೊರತಾಗಿ ಅವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಹೈಕೋರ್ಟ್ ತಾಕೀತು ಮಾಡಿದೆ.
0 Comments