Ticker

6/recent/ticker-posts

Ad Code

Responsive Advertisement

*ಡಿಕೆ ಬ್ರದರ್ಸ್ ಡೈರಿ ಪಾಲಿಟಿಕ್ಸ್': ದೊಡ್ಡಗೌಡರ ಕುಟುಂಬದಿಂದ ಹಿಡಿತ ಕಸಿದುಕೊಳ್ಳಲು ಯತ್ನ; KMF ಅಧ್ಯಕ್ಷಗಾದಿಯತ್ತ ಡಿಕೆ ಸುರೇಶ್ ಚಿತ್ತ!******


*ಬೆಂಗಳೂರು:*  ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಹೋದರ ಹಾಗೂ ಮಾಜಿ ಸಂಸದ ಡಿಕೆ ಸುರೇಶ್, ಹಾಲು ಸಹಕಾರಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಯೋಜನೆ ರೂಪಿಸಿರುವಂತೆ ತೋರುತ್ತಿದೆ. ಪ್ರಸಿದ್ಧ ಕರ್ನಾಟಕ ಹಾಲು ಒಕ್ಕೂಟದ (ಕೆಎಂಎಫ್) ಅಧ್ಯಕ್ಷರಾಗಲು ಒಂದು ಮೆಟ್ಟಿಲು ಎಂಬಂತೆ, ಸುರೇಶ್ ಶನಿವಾರ ಕನಕಪುರದಿಂದ ಬೆಂಗಳೂರು ಹಾಲು ಒಕ್ಕೂಟ ಲಿಮಿಟೆಡ್ (ಬಮುಲ್) ಹುದ್ದೆಗೆ ನಾಮಪತ್ರ ಸಲ್ಲಿಸಿದ್ದಾರೆ. ಡಿ.ಕೆ ಸುರೇಶ್ ಆಯ್ಕೆ ಬಹುತೇಕ ಖಚಿತವಾಗಿದ್ದು, ಬಮುಲ್‌ನಿಂದ ಕೆಎಂಎಫ್‌ಗೆ ನಾಮನಿರ್ದೇಶನಗೊಳ್ಳುವ ಸಾಧ್ಯತೆಯಿದೆ, ಇದು ಅವರನ್ನು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಯಾಗಿ ಆಯ್ಕೆ ಮಾಡಲು ದಾರಿ ಮಾಡಿಕೊಡುತ್ತದೆ. ಕೋಲಾರ, ಚಿಕ್ಕಬಳ್ಳಾಪುರ, ಮಂಗಳೂರು ಮತ್ತು ಬಳ್ಳಾರಿ ಹಾಲು ಒಕ್ಕೂಟಗಳಲ್ಲಿ ನಿರ್ದೇಶಕರ ಹುದ್ದೆಗಳಿಗೆ ಚುನಾವಣೆ ನಡೆದ ನಂತರ, ಒಂದೆರಡು ತಿಂಗಳಲ್ಲಿ ಕೆಎಂಎಫ್‌ಗೆ ಚುನಾವಣೆ ನಡೆಯುವ ಸಾಧ್ಯತೆಯಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಕುಟುಂಬವು ಕೆಎಂಎಫ್‌ನ ಆಡಳಿತವನ್ನು ಕಸಿದುಕೊಳ್ಳಲು ಡಿಕೆ ಸಹೋದರರು ಪ್ರಯತ್ನಿಸುತ್ತಿದ್ದಾರೆ ಎಂದು ವ್ಯಾಖ್ಯಾನಿಸಲಾಗುತ್ತಿದೆ. ಮಾಜಿ ಸಚಿವ ಎಚ್‌ಡಿ ರೇವಣ್ಣ ಒಂಬತ್ತು ವರ್ಷಗಳ ಕಾಲ ಕೆಎಂಎಫ್ ಅಧ್ಯಕ್ಷರಾಗಿದ್ದರು. ರೇವಣ್ಣ ಇನ್ನೂ ಈ ವಲಯದ ಮೇಲೆ ಹಿಡಿತ ಹೊಂದಿದ್ದಾರೆ ಮತ್ತು ಸತತ ಏಳನೇ ಅವಧಿಗೆ ಹಾಸನ ಹಾಲು ಒಕ್ಕೂಟ ನಿಯಮಿತ (ಹಾಮುಲ್) ಅಧ್ಯಕ್ಷರಾಗಿದ್ದಾರೆ.ಕೆಎಂಎಫ್ ಅಧ್ಯಕ್ಷರಾಗಿ ಸುರೇಶ್ ಆಯ್ಕೆಯಾಾಗುವುದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಶಿವಕುಮಾರ್ ನಡುವಿನ ಮೈತ್ರಿಗೆ ವೇದಿಕೆಯನ್ನು ಸಿದ್ಧಪಡಿಸಬಹುದು. 2023 ರಿಂದ ಕೆಎಂಎಫ್ ಅಧ್ಯಕ್ಷರಾಗಿರುವ ಸಿದ್ದರಾಮಯ್ಯ ಅವರ ಆಪ್ತ ಭೀಮಾ ನಾಯಕ್ ಹುದ್ದೆಯಲ್ಲಿ ಮುಂದುವರಿಯಲು ಬಯಸಿ ಚುನಾವಣೆಯಲ್ಲಿಯೂ ಸ್ಪರ್ಧಿಸುವ ಸಾಧ್ಯತೆಯಿದೆ. ತಿರುಪತಿ ಲಡ್ಡುಗಳಿಗೆ ನಂದಿನಿ ತುಪ್ಪವನ್ನು ಪೂರೈಸಲು ಆಂಧ್ರಪ್ರದೇಶ ಸರ್ಕಾರದೊಂದಿಗೆ ಒಪ್ಪಂದವನ್ನು ಪುನರುಜ್ಜೀವನಗೊಳಿಸಿದ ಕೀರ್ತಿಭೀಮಾ ನಾಯ್ಕ್ ಗೆ ಸಲ್ಲುತ್ತದೆ.
     ಯೋಗೇಶ್ ಶಿರೂರು

Post a Comment

0 Comments