*ನವದೆಹಲಿ:* ಆ್ಯಪಲ್ ಐಫೋನ್ ತಯಾರಿಕೆಯಲ್ಲಿ ಭಾರತದ ಮಹತ್ವದ ಸಾಧನೆಗೈದಿದ್ದು, ಚೀನಾ ಹಿಂದಿಕ್ಕಿ ಅತಿದೊಡ್ಡಐಫೋನ್ ರಫ್ತುದಾರ ರಾಷ್ಟ್ರ ಎಂಬ ಕೀರ್ತಿಗೆ ಭಾಜನವಾಗಿದೆ. ಈ ಬಗ್ಗೆ ಮಾರುಕಟ್ಟೆ ಸಂಶೋಧನಾ ಸಂಸ್ಥೆ ಓಮ್ಡಿಯಾ ವರದಿ ಮಾಡಿದ್ದು, 'ಭಾರತವು ಐಫೋನ್ ತಯಾರಿಕೆಯಲ್ಲಿ ಚೀನಾವನ್ನು ಹಿಂದಿಕ್ಕಿ ಅಮೆರಿಕಕ್ಕೆ ಅತಿದೊಡ್ಡ ಐಫೋನ್ ರಫ್ತುದಾರ ರಾಷ್ಟ್ರವಾಗಿದೆ. ಭಾರತದಲ್ಲಿ ತಯಾರಾದ ಸುಮಾರು ಮೂರು ಮಿಲಿಯನ್ ಐಫೋನ್‌ಗಳನ್ನು ಏಪ್ರಿಲ್‌ನಲ್ಲಿ ಅಮೆರಿಕಕ್ಕೆ ರವಾನಿಸಲಾಗಿದೆ. ಇತ್ತೀಚಿನ ಅಂದಾಜಿನ ಪ್ರಕಾರ ಚೀನಾದಿಂದ ಫೋನ್ ಸಾಗಣೆಗಳು ಶೇ.76% ರಷ್ಟು ಕುಸಿದು ಕೇವಲ 900,000 ಯೂನಿಟ್‌ಗಳಿಗೆ ತಲುಪಿವೆ ಎಂದು ವರದಿ ಹೇಳಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದೇಶದಲ್ಲಿ ಆಮದು ಮಾಡಿಕೊಳ್ಳದ ಐಫೋನ್‌ಗಳ ಮೇಲೆ 25% ಸುಂಕ ವಿಧಿಸುವುದಾಗಿ ಎಚ್ಚರಿಸಿದ ನಂತರವೂ ಆ್ಯಪಲ್ ಗಮನಾರ್ಹ ಸವಾಲನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆಗಳು ಬಂದಿರುವುದು ವಿಶೇಷವಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆ್ಯಪಲ್ ಸಂಸ್ಥೆಯ ಮುಖ್ಯಸ್ಥ ಟಿಮ್ ಕುಕ್ ಅವರನ್ನು ಅಮೆರಿಕಕ್ಕಾಗಿ ಐಫೋನ್ ಗಳನ್ನು ತಯಾರಿಸಲು ಭಾರತದಲ್ಲಿ ಘಟಕಗಳನ್ನು ನಿರ್ಮಿಸುವುದನ್ನು ನಿಲ್ಲಿಸುವಂತೆ ಕೇಳಿದ ಕೆಲವು ದಿನಗಳ ನಂತರ ಈ ವರದಿ ಬಂದಿದೆ.
0 Comments