ಭಾರತದ ಭಯೋತ್ಪಾದನೆ ನಿರ್ಮೂಲನೆ ಮಾಡಲು ಹೊಸ ಅಸ್ತ್ರವನ್ನು ಪ್ರಯೋಗಿಸಿದೆ. ಈ ಬಾರಿ ಪಾಕ್ ಹಾಗೂ ಭಯೋತ್ಪಾದನೆ ಕೃತ್ಯಕ್ಕೆ ಒಂದು ಪೂರ್ಣವಿರಾಮ ಹಾಕುವ ಲಕ್ಷಣಗಳು ಗೋಚರಿಸುತ್ತಿದೆ. ಹೌದು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಭಾರತ 26 ನಾಗರಿಕರನ್ನು ಹಾಗೂ ಸೈನಿಕರನ್ನು ಕಳೆದುಕೊಂಡಿದೆ. ಇದಕ್ಕೆ ಪ್ರತಿಕಾರವಾಗಿ ಭಾರತ ಕೂಡ ಮೇ 7ರಂದು ಆಪರೇಷನ್ ಸಿಂದೂರದಮೂಲಕ ಮಹತ್ವದ ಉತ್ತರವನ್ನು ನೀಡಿತ್ತು. ಇದೀಗ ಜಗತ್ತಿನ ಮುಂದೆ ಪಾಕ್ ಹಾಗೂ ಭಯೋತ್ಪಾದಕರನ್ನು ಬೆತ್ತಲೆ ಮಾಡಲು ಕೇಂದ್ರ ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಇದಕ್ಕಾಗಿ ಭಾರತ ಸರ್ಕಾರ ಸರ್ವಪಕ್ಷದ ಸಹಕಾರದೊಂದಿದೆ ಪಾಕ್ಗೆ ಬುದ್ಧಿ ಕಲಿಸಲು ಮುಂದಾಗಿದೆ. ಸರ್ವಪಕ್ಷ ನಿಯೋಗವನ್ನು ಭಾರತದ ಮಿತ್ರರಾಷ್ಟ್ರಗಳಿಗೆ ಕಳುಹಿಸಿ ಅಲ್ಲಿ ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಭಾರತ ಹೊಂದಿದೆ ಎಂದು ಸಾರುವ ಕೆಲಸ ಮಾಡಲಿದೆ. ಈ ನಿಯೋಗದ ನೇತೃತ್ವವನ್ನು ಕಾಂಗ್ರೆಸ್ ಸಂಸದ ಶಶಿ ತರೂರ್ಗೆ ನೀಡಲಾಗಿದೆ. ಇದು ಅಚ್ಚರಿಯೂ ಹೌದು, ಸತ್ಯವು ಹೌದು. ಕಾಂಗ್ರೆಸ್ ಬಿಜೆಪಿ ವಿರೋಧ ಪಕ್ಷಗಳಾಗಿದ್ದರು, ದೇಶದ ವಿಷಯ ಬಂದಾಗ ಒಟ್ಟಾಗಿರಬೇಕು ಎಂದು ಈ ಮೂಲಕ ಹೇಳಿದೆಆಪರೇಷನ್ ಸಿಂಧೂರ್ ನಂತರ ಕೇಂದ್ರ ಸರ್ಕಾರವನ್ನು ಹೊಗಳಿದ್ದ ಕಾಂಗ್ರೆಸ್ ಸಂಸದ ಶಶಿ ತರೂರ್, ತಮ್ಮ ಪಕ್ಷದಲ್ಲೇ ಟೀಕೆಗೆ ಒಳಗಾಗಿದ್ದರು. ಇದೀಗ ಅವರು ಭಯೋತ್ಪಾದನೆಯ ವಿರುದ್ಧ ಶೂನ್ಯ ಸಹಿಷ್ಣುತೆಯ ಭಾರತದ ಬಲವಾದ ಸಂದೇಶವನ್ನು ಜಗತ್ತಿಗೆ ಸಾರಲು ಸರ್ವಪಕ್ಷ ನಿಯೋಗದ ನೇತೃತ್ವ ವಹಿಸಲಿದ್ದಾರೆ. ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ದಲ್ಲಿನ ಭಯೋತ್ಪಾದಕ ಶಿಬಿರಗಳ ವಿರುದ್ಧ ಭಾರತ ನಡೆಸಿದ ಆಪರೇಷನ್ ಸಿಂಧೂರ್ ನಂತರ ನಡೆಯುತ್ತಿರುವ ಪ್ರಮುಖ ಸಂಪರ್ಕ ಕಾರ್ಯಾಚರಣೆಯನ್ನು ಕೈಗೊಳ್ಳಲು ಸರ್ಕಾರ ಶನಿವಾರ ತರೂರ್ ಮತ್ತು ವಿರೋಧ ಪಕ್ಷದ ಇಬ್ಬರು ಮತ್ತು ಆಡಳಿತಾರೂಢ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟದ (ಎನ್‌ಡಿಎ) ನಾಲ್ವರು ಸೇರಿದಂತೆ ಆರು ಇತರ ಸಂಸದರನ್ನುಈ ನಿಯೋಗದಲ್ಲಿ ಹೆಸರಿಸಿದೆ .
0 Comments