ಅಪೋಲೋ ಹಾಸ್ಪಿಟಲ್ಸ್ ಭಾರತದ ಅತಿದೊಡ್ಡ ಖಾಸಗಿ ಆಸ್ಪತ್ರೆ ಸಮೂಹ ಎನಿಸಿದೆ. ದೇಶಾದ್ಯಂತ 73 ಆಸ್ಪತ್ರೆಗಳು, 2,300 ಡಯಾಗ್ನಸ್ಟಿಕ್ಸ್ ಸೆಂಟರ್ಸ್, 700ಕ್ಕೂ ಅಧಿಕ ಕ್ಲಿನಿಕ್, 6,500ಕ್ಕೂ ಹೆಚ್ಚು ಫಾರ್ಮಸಿಗಳು ಇವೆ. 11,000ಕ್ಕೂ ಅಧಿಕ ವೈದ್ಯರು ಕೆಲಸ ಮಾಡುತ್ತಾರೆ. ಇಷ್ಟು ದೊಡ್ಡ ನೆಟ್ವರ್ಕ್ ಇರುವ ಆಸ್ಪತ್ರೆ ಸಮೂಹ ಭಾರತದಲ್ಲಿ ಇದೆ ಎಂದರೆ ಅದು ಅಪೋಲೋ ಮಾತ್ರವೇ. ಇದರ ಮೌಲ್ಯ ಒಂದು ಲಕ್ಷ ಕೋಟಿ ರೂಗಿಂತಲೂ ಅಧಿಕ. ಒಂದು ಟ್ರಿಲಿಯನ್ ರುಪಾಯಿ ಮೌಲ್ಯದ ಕಂಪನಿಯ ಒಡೆಯ ಡಾ. ಪ್ರತಾಪ್ ಸಿ ರೆಡ್ಡಿ ಅವರ ಕಥೆ ನಿಜಕ್ಕೂ ಸ್ಫೂರ್ತಿ ನೀಡುವಂಥದ್ದು. ಆಂಧ್ರದ ಚಿತ್ತೂರಿನ ಅರಗೊಂಡ ಎನ್ನುವ ಒಂದು ಸಣ್ಣ ಗ್ರಾಮದಲ್ಲಿ 1933 ರಲ್ಲಿ ಹುಟ್ಟಿದವರು ಡಾ. ರೆಡ್ಡಿ. ಈಗ 92 ವರ್ಷ ವಯಸ್ಸಾಗಿರುವ ಪ್ರತಾಪ್ ರೆಡ್ಡಿ ಅವರು ಭಾರತದಲ್ಲಿ ಎಂಬಿಬಿಎಸ್ ಮಾಡಿ, ಅಮೆರಿಕ ಬ್ರಿಟನ್ ಮೊದಲಾದ ಕಡೆ ಉನ್ನತ ವೈದ್ಯಕೀಯ ಶಿಕ್ಷಣ ಪಡೆದಿದ್ದಾರೆ. ಪ್ರತಾಪ್ ರೆಡ್ಡಿ ಅವರು ವಿದೇಶದಲ್ಲಿ ಕೆಲಸ ಮಾಡುತ್ತಿದ್ದಾಗ ಮನಕಲಕುವ ಒಂದು ಘಟನೆ ನಡೆಯಿತು. ವಿದೇಶದಲ್ಲಿ ಚಿಕಿತ್ಸೆ ಸಿಗಲು ಸಾಧ್ಯವಾಗದೇ ಭಾರತದ ಒಂದು ಮಗು ಸಾವನ್ನಪ್ಪಿತು. ಆ ಮಗುವಿನ ಪೋಷಕರಿಗೆ ವಿದೇಶದಲ್ಲಿ ಚಿಕಿತ್ಸೆ ಕೊಡಿಸುವ ಶಕ್ತಿ ಇರಲಿಲ್ಲ. ಆ ಒಂದು ಘಟನೆಯು ಡಾ. ಪ್ರತಾಪ್ ಸಿ ರೆಡ್ಡಿ ಅವರ ಜೀವನಕ್ಕೆ ಮಹತ್ತರ ಧ್ಯೇಯ ನೀಡಿತು. Yogesh shiruru
0 Comments