Ticker

6/recent/ticker-posts

Ad Code

Responsive Advertisement

*ರೈಲಿನಲ್ಲಿ ಹೋಗುವಾಗ ಮೊಬೈಲ್ ಅಥವಾ ಪರ್ಸ್ ಹೊರ ಬಿದ್ದರೆ ಏನು ಮಾಡಬೇಕು?: ಇಲ್ಲಿದೆ ಮಾಹಿತಿ*********


*ಬೆಂಗಳೂರು:* ಪ್ರತಿದಿನ ಲಕ್ಷಾಂತರ ಜನರು ರೈಲಿನಲ್ಲಿ ಪ್ರಯಾಣಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ, ಭಾರತೀಯ ರೈಲ್ವೆ ತನ್ನ ಪ್ರಯಾಣಿಕರ ಪ್ರಯಾಣವನ್ನು ಹೆಚ್ಚು ಅನುಕೂಲಕರವಾಗಿಸಲು ಯಾವಾಗಲೂ ಹೊಸ ಕ್ರಮಗಳನ್ನು ತೆಗೆದುಕೊಳ್ಳುತ್ತದೆ. ರೈಲುಗಳಲ್ಲಿ ಪ್ರಯಾಣಿಸುವಾಗ ಪ್ರಯಾಣಿಕರು ತಮ್ಮ ಫೋನ್ ಬಳಸುವುದನ್ನು ನಾವು ಹೆಚ್ಚಾಗಿ ನೋಡುತ್ತೇವೆ. ಆದರೆ, ಕೆಲವೊಮ್ಮೆ ಅಜಾಗರೂಕತೆಯಿಂದ, ಪ್ರಯಾಣ ಮಾಡುವಾಗ ಮೊಬೈಲ್, ಪರ್ಸ್ ಅಥವಾ ವಾಚ್​ನಂತಹ ಬೆಲೆಬಾಳುವ ವಸ್ತುಗಳು ರೈಲಿನಿಂದ ಹೊರಗೆ ಬೀಳುತ್ತವೆ. ಅಂತಹ ಸಂದರ್ಭಗಳಲ್ಲಿ, ಜನರು ತುಂಬಾ ಚಿಂತಿತರಾಗುತ್ತಾರೆ.ಬ್ಯಾಂಕಿಂಗ್ ವಿವರಗಳಿಂದ ಹಿಡಿದು ಪ್ರಮುಖ ಐಡಿಗಳವರೆಗೆ ಎಲ್ಲಾ ಮಾಹಿತಿಯನ್ನು ನಾವು ನಮ್ಮ ಫೋನ್‌ನಲ್ಲಿ ಸೇವ್ ಮಾಡಿಕೊಟ್ಟುಕೊಡಿರುತ್ತೇವೆ. ಅಂತಹ ಪರಿಸ್ಥಿತಿಯಲ್ಲಿ, ಫೋನ್ ಎಲ್ಲೋ ಬಿದ್ದರೆ ಅಥವಾ ಕಳೆದುಹೋದರೆ, ಅದು ಬಹಳಷ್ಟು ತೊಂದರೆ ಉಂಟುಮಾಡುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು, ಭಾರತೀಯ ರೈಲ್ವೆ ಕೆಲವು ನಿಯಮಗಳನ್ನು ಮಾಡಿದೆ. ಅದರ ಸಹಾಯದಿಂದ ನೀವು ಕಳೆದುಹೋದ ವಸ್ತುವನ್ನು ಮರಳಿ ಪಡೆಯಬಹುದು. ನಿಮ್ಮ ವಸ್ತುಗಳನ್ನು ಮರಳಿ ಪಡೆಯಲು ಇಲ್ಲಿದೆ ನೋಡಿ ಮಾಹಿತಿ.ಚಲಿಸುವ ರೈಲಿನಿಂದ ಫೋನ್ ಅಥವಾ ಪರ್ಸ್ ಬಿದ್ದರೆ ನೀವು ಮೊದಲು ರೈಲ್ವೇ ಹಳಿಯ ಬದಿಯಲ್ಲಿ ಅಳವಡಿಸಿರುವ ಕಂಬದ ಮೇಲೆ ಬರೆದಿರುವ ಸಂಖ್ಯೆ ಅಥವಾ ಸೈಡ್ ಟ್ರಾಕ್ ಸಂಖ್ಯೆಯನ್ನು ಗಮನಿಸಬೇಕು. ಇದರ ನಂತರ, ನಿಮ್ಮ ಪಕ್ಕದಲ್ಲಿರುವ ಪ್ರಯಾಣಿಕರಿಂದ ಫೋನ್ ಕೇಳಿ ಆರ್‌ಪಿಎಫ್ ಮತ್ತು ಸಂಖ್ಯೆ 182 ಕ್ಕೆ ಮಾಹಿತಿಯನ್ನು ನೀಡಿ. ಈ ಸಮಯದಲ್ಲಿ, ಫೋನ್ ಯಾವ ಕಂಬ ಅಥವಾ ಟ್ರ್ಯಾಕ್ ಸಂಖ್ಯೆಯ ಬಳಿ ಬಿದ್ದಿದೆ ಎಂದು ತಿಳಿಸಿ.  
      ಯೋಗೇಶ್ ಶಿರೂರು

Post a Comment

0 Comments