*
*ಹುಬ್ಬಳ್ಳಿ:* ಬಿಜೆಪಿಯಿಂದ ದೂರವಾಗಿರುವ ಮಾಜಿ ಶಾಸಕ ಕೆಎಸ್ ಈಶ್ವರಪ್ಪ ಹಿಂದೂತ್ವ ಬಿಜೆಪಿಯ ಸೊತ್ತಲ್ಲ, ಬೇರೆ ಬೇರೆ ಪಕ್ಷಗಳ ಅನೇಕ ನಾಯಕರು ಭಾರತೀಯ ಸಂಸ್ಕೃತಿಯನ್ನು ಕಾಪಾಡುತತ್ತಿದ್ದಾರೆ, ಅವರಲ್ಲೊಬ್ಬರು ಡಿಕೆ ಶಿವಕುಮಾರ್ ಎಂದು ಹೇಳಿದರು. ಗಾಂಧಿಯ ಬಗ್ಗೆ ಮಾತಾಡಿದ ಅವರು, ಸ್ವಾತಂತ್ರ್ಯ ಸಿಕ್ಕ ಬಳಿಕ ಗೋಹತ್ಯೆ ನಿಷೇಧ ಕಾನೂನು ತರಬೇಕು ಅಂತ ಅವರು ಹೇಳಿದ್ದರು, ಅವರು ಸಾಯುವಾಗ ಹೇ ರಾಮ್ ಎಂದು ಚೀತ್ಕರಿಸಿದರು, ಅವರ ಸಮಾಧಿ ಮೇಲೆ ಹೇ ಅಲ್ಲಾಹ್ ಅಥವಾ ಹೇ ಏಸು ಅಂತ ಬರೆದಿಲ್ಲ, ಎಲ್ಲರನ್ನು ಒಟ್ಟಿಗೆ ಕರೆದುಕೊಂಡು ಹೋಗೋದೇ ಹಿಂದೂ ಧರ್ಮ, ಹಿಂದೂಗಳು ಯಾವ ದೇವರಿಗೆ ನಮಸ್ಕರಿಸಿದರೂ ಅದು ಸಲ್ಲೋದು ಒಬ್ಬನಿಗೆ ಮಾತ್ರ ಎಂದು ಈಶ್ವರಪ್ಪ ಹೇಳಿದರು.
0 Comments