Ticker

6/recent/ticker-posts

Ad Code

Responsive Advertisement

*ಮಂಗಳೂರಿನ ಪೆಟ್ರೋಲ್​ ಬಂಕ್​ನಲ್ಲಿ ತನ್ನದೇ ಕ್ಯುಆರ್ ಕೋಡ್ ಇಟ್ಟ ಸಿಬ್ಬಂದಿ! ಆಮೇಲೇನಾಯ್ತು?


*ಮಂಗಳೂರು:* ಪೆಟ್ರೋಲ್ ಬಂಕ್ ಸಿಬ್ಬಂದಿಯೊಬ್ಬ ತನ್ನದೇ ಕ್ಯುಆರ್​ ಕೋಡ್ ಅನ್ನು ಬಂಕ್​ನಲ್ಲಿರಿಸಿ ಮಾಲೀಕರಿಗೆ ವಂಚಿಸಿದ ಘಟನೆ ಮಂಗಳೂರಿನ ಬಂಗ್ರಕುಳೂರು ಎಂಬಲ್ಲಿ ನಡೆದಿದೆ. ಸಿಬ್ಬಂದಿ ಬರೋಬ್ಬರಿ 2 ವರ್ಷಗಳಿಂದ ಕೃತ್ಯ ಎಸಗುತ್ತಾ ಬಂದಿದ್ದು, ಕೊನೆಗೂ ಮಾಲೀಕರ ಅರಿವಿಗೆ ಬಂದಿದೆ. ಸದ್ಯ ಅವರು ನೀಡಿರುವ ದೂರಿನ ಮೇರೆಗೆ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳೂರಿನ ಬಂಗ್ರಕುಳೂರು ಬಳಿಯ ರಿಲಯನ್ಸ್​ ಔಟ್​ಲೆಟ್​ನಲ್ಲಿ ಬಂಕ್​ನ ಸೂಪರ್​ ವೈಸರ್ 2 ವರ್ಷದಲ್ಲಿ ಬರೋಬ್ಬರಿ 58 ಲಕ್ಷ ರೂಪಾಯಿ ವಂಚನೆ ಎಸಗಿದ್ದಾನೆ. ಗ್ರಾಗಕರು ಪಾವತಿಗಾಗಿ ಬಳಸಲು ಬಂಕ್​ನಲ್ಲಿಟ್ಟಿದ್ದ ಕ್ಯುಆರ್​ ಕೋಡ್​ ಅನ್ನು ತೆರವು ಮಾಡಿದ್ದ ಆರೋಪಿ ತನ್ನದೇ ಕ್ಯುಆರ್​ ಕೋಡ್​ ಇಟ್ಟಿದ್ದ. ಪರಿಣಾಮವಾಗಿ ಗ್ರಾಹಕರು ಪಾವತಿ ಮಾಡಿದ ಹಣ ಸಿಬ್ಬಂದಿಯ ಬ್ಯಾಂಕ್ ಖಾತೆಗೆ ವರ್ಗಾವಣೆಯಾಗುತ್ತಿತ್ತು. ವಂಚನೆ ಎಸಗಿದ ಆರೋಪಿಯನ್ನು ಮಂಗಳೂರಿನ ಬಜ್ಪೆ ನಿವಾಸಿ ಮೋಹನದಾಸ್ ಎಂದು ಗುರುತಿಸಲಾಗಿದ್ದು, ಈತ ಸುಮಾರು 15 ವರ್ಷಗಳಿಂದ ಪೆಟ್ರೋಲ್​​ ​ಬಂಕ್​ನಲ್ಲಿ ಕೆಲಸಕ್ಕಿದ್ದ ಎನ್ನಲಾಗಿದೆ. ಬಂಕ್​ನ ಹಣಕಾಸು ವ್ಯವಹಾರ, ನಿರ್ವಹಣೆ ಜವಬ್ದಾರಿ ಹೊತ್ತಿದ್ದ ಮೋಹನದಾಸ, 10-03-2020 ರಿಂದ 31-07-2022ರವರೆಗೆ ಕ್ಯುಆರ್ ಕೋಡ್ ಬದಲಿಸಿದ್ದ. ಆರೋಪಿ ವಿರುದ್ಧ ರಿಲಯನ್ಸ್​​ ಕಂಪನಿ ಮ್ಯಾನೇಜರ್​ ಸಂತೋಷ್​​ ಮ್ಯಾಥ್ಯೂ ದೂರು ನೀಡಿದ್ದು, ಮಂಗಳೂರಿನ ಸೈಬರ್​ ಕ್ರೈಂ ಮತ್ತು ಎಕನಾಮಿಕ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸದ್ಯ ಮೋಹನದಾಸನನ್ನು ಬಂಧಿಸಿರುವ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.

Post a Comment

0 Comments