ಉದ್ಯೋಗ : ರೈಲ್ವೆ ಇಲಾಖೆಯಲ್ಲಿ (railway department) ಉದ್ಯೋಗ ಬಯಸುತ್ತಿರುವವರಿಗೆ ಗುಡ್ ನ್ಯೂಸ್ ಒಂದಿದೆ. ಸೌತ್ ಈಸ್ಟರ್ನ್ ರೈಲ್ವೆ (south eastern railway) ಇಲಾಖೆಯಲ್ಲಿ 1,785 ಹುದ್ದೆಗಳ ನೇಮಕಾತಿಗಾಗಿ (recruitment) ಅರ್ಜಿ ಆಹ್ವಾನಿಸಿದೆ.
ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಅವಶ್ಯವಿರುವ ಮಾಹಿತಿಯನ್ನು ಇಲ್ಲಿ ನೋಡಬಹುದಾಗಿದ್ದು, ಆದರೂ ಅಧಿಕೃತ ವೆಬ್‌ಸೈಟ್‌ನಲ್ಲಿ ಪರೀಕ್ಷಿಸಿ ಅರ್ಜಿ ಸಲ್ಲಿಸಿ. ಅರ್ಜಿ ಸಲ್ಲಿಸಲು ಬೇಕಾದ ವಿವಿರಗಳನ್ನು ಇಲ್ಲಿ ಕೊಡಲಾಗಿದೆ.
ಇಲಾಖೆ ಹೆಸರು : ಸೌತ್ ಈಸ್ಟರ್ನ್ ರೈಲ್ವೆ.
ಹುದ್ದೆಗಳ ಸಂಖ್ಯೆ : 1,785.
ಹುದ್ದೆಗಳ ಹೆಸರು : ಅಪ್ರೆಂಟಿಸ್.
ಉದ್ಯೋಗ ಸ್ಥಳ : ಭಾರತದಾದ್ಯಂತ (All India).
ಅಪ್ಲಿಕೇಶನ್ ಬಗೆ : ಆನ್‌ಲೈನ್ ಮೋಡ್.
ಶೈಕ್ಷಣಿಕ ಅರ್ಹತೆ :
ಅಭ್ಯರ್ಥಿಗಳು ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ (Recognized Institution) 10ನೇ ತರಗತಿ/ ತತ್ಸಮಾನ ಪರೀಕ್ಷೆಯಲ್ಲಿ (Equivalent Examination) ಕನಿಷ್ಠ 50% ಅಂಕಗಳೊಂದಿಗೆ ಪಾಸ್ ಆಗಿರಬೇಕು. ಅಲ್ಲದೇ ಆಯಾ ಟ್ರೇಡ್ ಗಳಲ್ಲಿ ITI ಹೊಂದಿರಬೇಕು.
ವಯೋಮಿತಿ :
ದಿನಾಂಕ 01 ಜನವರಿ 2025ಕ್ಕೆ ಅಭ್ಯರ್ಥಿಗಳಿಗೆ ಕನಿಷ್ಠ 15 ವರ್ಷ (At least 15 years) ಪೂರೈಸಿರಬೇಕು ಹಾಗೂ ಗರಿಷ್ಠ 24 ವರ್ಷ (Maximum 24 years) ಮೀರಿರಬಾರದು.
ವಯೋಮಿತಿ ಸಡಿಲಿಕೆ (Age relaxation) :
* ಎಸ್ಸಿ, ಎಸ್ಟಿ : 05 ವರ್ಷ.
* ಒಬಿಸಿ : 03 ವರ್ಷ.
* ಅಂಗವಿಕಲ ಅಭ್ಯರ್ಥಿಗಳಿಗೆ : 10 ವರ್ಷ.
ವೇತನದ (salary) ವಿವರ :
ಅಧಿಸೂಚನೆಯ ಪ್ರಕಾರ ಆಯ್ಕೆಯಾದ ಅಭ್ಯರ್ಥಿಗಳಿಗೆ ಪ್ರತಿ ತಿಂಗಳು ರೂ.75000/- ವೇತನ ನೀಡಲಾಗುತ್ತದೆ.
ಅರ್ಜಿ ಸಲ್ಲಿಕೆಯ ಶುಲ್ಕ :
* ಎಸ್ಸಿ, ಎಸ್ಟಿ, ಮಹಿಳಾ, ಪಿಡಬ್ಲ್ಯೂಡಿ ಅಭ್ಯರ್ಥಿಗಳಿಗೆ : ಇಲ್ಲ
* ಉಳಿದ ಅಭ್ಯರ್ಥಿಗಳಿಗೆ : ರೂ. 100
ಆಯ್ಕೆ ವಿಧಾನ :
* ಮೆರಿಟ್ ಪಟ್ಟಿ (Merit List)
* ದಾಖಲೆ ಪರಿಶೀಲನೆ (Document verification)
ಪ್ರಮುಖ ದಿನಾಂಕ :
* ಅರ್ಜಿ ಸಲ್ಲಿಕೆಗೆ ಪ್ರಾರಂಭದ ದಿನಾಂಕ : ನವೆಂಬರ್ 28, 2024.
* ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಡಿಸೆಂಬರ್ 27, 2024.
Disclaimer : The above given information is available On online, candidates should check it properly before applying. This is for information only.
0 Comments