: ರಾಯಚೂರು ಗ್ರಾಮಾಂತರ ವ್ಯಾಪ್ತಿಯ ಇಡಪನೂರು ಪೊಲೀಸ್ ಠಾಣೆ (Idapanur Police Station) ಪಿಎಸ್‌ಐ ಅವರನ್ನು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (District Superintendent of Police) ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.
ಅಮಾನತುಗೊಂಡ (suspend) ಪೊಲೀಸ್ ಅಧಿಕಾರಿ ಅವಿನಾಶ್ ಕಾಂಬ್ಳೆ ಎಂದು ತಿಳಿದು ಬಂದಿದೆ.
ಕರ್ತವ್ಯದಲ್ಲಿ ಲೋಪ ಮತ್ತು ನಿರ್ಲಕ್ಷ್ಯ (Dereliction of duty and negligence) ಕಂಡುಬಂದಿರುವ ಹಿನ್ನೆಲೆಯಲ್ಲಿ ಇಡಪನೂರು ಪಿಎಸ್‌ಐ ಅವಿನಾಶ್ ಕಾಂಬ್ಳೆ ಅವರನ್ನು ಸಸ್ಪೆಂಡ್ ಮಾಡಲಾಗಿದೆ.
ಇಡಪನೂರು ಪಿಎಸ್ಐ ಅವರು ಅಪಘಾತ ನಡೆದ ವೇಳೆ ಸ್ಥಳ ಪರಿಶೀಲನೆಯ ವಿಳಂಬ, ಠಾಣೆಯಲ್ಲಿ ಸರಿಯಾಗಿ ಹಾಜರಾಗದಿರುವುದು (Non- attendance at the station) ಹಾಗೂ ಸಾರ್ವಜನಿಕರ ದೂರುಗಳಿಗೆ ಸ್ಪಂದಿಸದಿರುವುದು ಹೀಗೆ ವಿವಿಧ ಕಾರಣಗಳ (various reasons) ಹಿನ್ನೆಲೆಯಲ್ಲಿ ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ.
0 Comments