Ticker

6/recent/ticker-posts

Ad Code

Responsive Advertisement

*ಟಾಟಾ ನೆಕ್ಸಾನ್ ಕಾರು ಬೇಕಿದ್ದರೆ ಈ ತಿಂಗಳೇ ಖರೀದಿಸಿ: ಜನವರಿಯಿಂದ ಪ್ರೈಸ್ ಹೈಕ್**


ನೀವು ಹೊಸ ವರ್ಷದಲ್ಲಿ ಕಾರನ್ನು ಖರೀದಿಸಬೇಕು ಎಂಬ ಪ್ಲ್ಯಾನ್​ನಲ್ಲಿದ್ದರೆ ದೊಡ್ಡ ಆಘಾತ ಉಂಟಾಗಲಿದೆ. ಯಾಕೆಂದರೆ ನ್ಯೂ ಈಯರ್​ಗೆ ಕಾರಿನ ದರ ದುಬಾರಿಯಾಗಲಿದೆ. ಅನೇಕ ಆಟೋ ಕಂಪನಿಗಳು ಜನವರಿ 2025 ರಿಂದ ಕಾರುಗಳ ಬೆಲೆಗಳನ್ನು ಹೆಚ್ಚಿಸುವುದಾಗಿ ಘೋಷಿಸಿವೆ. ಇದೀಗ ಈ ಪಟ್ಟಿಯಲ್ಲಿ ಟಾಟಾ ಮೋಟಾರ್ಸ್ ಹೆಸರೂ ಸೇರಿಕೊಂಡಿದೆ. ಹೊಸ ವರ್ಷದಂದು ನೀವು ಟಾಟಾ ನೆಕ್ಸಾನ್ ಅಥವಾ ಇನ್ನಾವುದೇ ಟಾಟಾ ಕಾರನ್ನು ಖರೀದಿಸಲು ಯೋಚಿಸುತ್ತಿದ್ದರೆ, ಈಗಿರುವುದಕ್ಕಿಂತ ಹೆಚ್ಚಿನ ಹಣವನ್ನು ನೀಡಬೇಕಾಗುತ್ತದೆ. ಟಾಟಾ ಮೋಟಾರ್ಸ್ ಜನವರಿ 2025 ರಿಂದ ಎಲ್ಲಾ ಕಾರುಗಳ ಬೆಲೆಯನ್ನು ಶೇಕಡಾ 3 ರಷ್ಟು ಹೆಚ್ಚಿಸುವುದಾಗಿ ಘೋಷಿಸಿದೆ. ಇವುಗಳಲ್ಲಿ ಎಲೆಕ್ಟ್ರಿಕ್ ಕಾರುಗಳೂ ಸೇರಿವೆ. ವಿವಿಧ ಮಾದರಿಗಳು ಮತ್ತು ರೂಪಾಂತರಗಳ ಆಧಾರದ ಮೇಲೆ ಕಾರುಗಳ ಬೆಲೆಗಳನ್ನು ಹೆಚ್ಚಿಸಲಾಗುವುದು ಎಂದಿದೆ. ಹಣದುಬ್ಬರ ಮತ್ತು ಹೆಚ್ಚುತ್ತಿರುವ ಇನ್‌ಪುಟ್ ವೆಚ್ಚವನ್ನು ಸರಿದೂಗಿಸಲು ಟಾಟಾ ಮೋಟಾರ್ಸ್ ಈ ಹೆಚ್ಚಳವನ್ನು ಮಾಡುತ್ತಿದೆ. ಹೊಸ ವರ್ಷದಲ್ಲಿ ಟಾಟಾ ಹೊರತಾಗಿ ಹಲವು ಕಾರು ಕಂಪನಿಗಳ ಕಾರುಗಳು ದುಬಾರಿಯಾಗಲಿವೆ. ಟಾಟಾ ಹೊರತುಪಡಿಸಿ ಇತರ ಯಾವ ಆಟೋ ಕಂಪನಿಗಳು ಬೆಲೆಗಳನ್ನು ಹೆಚ್ಚಿಸಲು ನಿರ್ಧರಿಸಿವೆ ಎಂಬುದನ್ನು ಇಲ್ಲಿ ತಿಳಿಯಿರಿ. ಮಾರುತಿ ಸುಜುಕಿ ಭಾರತೀಯ ಕಾರು ಮಾರುಕಟ್ಟೆಯಲ್ಲಿ ಸುಮಾರು 40 ಪ್ರತಿಶತ ಪಾಲನ್ನು ಹೊಂದಿದೆ. ಈ ಕಂಪನಿಯು ಹೊಸ ವರ್ಷದಂದು ಕಾರುಗಳ ಬೆಲೆಯನ್ನು ಹೆಚ್ಚಿಸುವುದಾಗಿ ಘೋಷಿಸಿದೆ. ನಿಯಂತ್ರಕ ಫೈಲಿಂಗ್ ಮೂಲಕ, ಮಾರುತಿ ತನ್ನ ಕಾರುಗಳ ಬೆಲೆಗಳು ಹೊಸ ವರ್ಷದಲ್ಲಿ ಶೇಕಡಾ 4 ರಷ್ಟು ಹೆಚ್ಚಾಗಲಿದೆ ಎಂದು ಮಾಹಿತಿ ನೀಡಿದೆ.

Post a Comment

0 Comments