Ticker

6/recent/ticker-posts

Ad Code

Responsive Advertisement

*ಪ್ರತಿ ತಿಂಗಳು ಎಷ್ಟು ಮಂದಿಗೆ ಯುವನಿಧಿ ಹಣ ಸೇರುತ್ತಿದೆ – ಲೆಕ್ಕ ಕೊಟ್ಟ ಸರ್ಕಾರ**


*ಬೆಳಗಾವಿ:* ಪ್ರತಿ ತಿಂಗಳು ಎಷ್ಟು ಮಂದಿ ಪದವೀಧರರ ಕೈಗೆ ಯುವನಿಧಿ  ಹಣ ಸೇರುತ್ತಿದೆ ಎಂಬ ಮಾಹಿತಿಯನ್ನು ಸಚಿವ ಶರಣ ಪ್ರಕಾಶ್ ಪಾಟೀಲ್ ಪರಿಷತ್‌ನಲ್ಲಿ ತಿಳಿಸಿದ್ದಾರೆ. ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ನವೀನ್ ಅವರು ರಾಜ್ಯದಲ್ಲಿ ಕಳೆದ 2 ವರ್ಷಗಳಲ್ಲಿ 8 ಲಕ್ಷ ವಿದ್ಯಾರ್ಥಿಗಳು ಪದವಿ ಮುಗಿಸಿದ್ದಾರೆ. ಆದರೆ ಯುವನಿಧಿಗೆ ನೋಂದಣಿ ಆಗಿರೋದು ಕಡಿಮೆ ಆಗಿದೆ ಯಾಕೆ? ಯುವನಿಧಿಗೆ ಪ್ರತಿ ತಿಂಗಳು ಹಣ ಕೊಡ್ತಿದ್ದೀರಾ? ಎಷ್ಟು ಹಣ ಕೊಡ್ತಿದ್ದೀರಾ ಅಂತ ಪ್ರಶ್ನೆ ಮಾಡಿದರು. ಇದಕ್ಕೆ ಸಚಿವ ಶರಣ ಪ್ರಕಾಶ್ ಪಾಟೀಲ್, ಈವರೆಗೆ 1,81,699 ಪದವೀಧರು ಯುವನಿಧಿಗೆ ನೋಂದಣಿ ಮಾಡಿಕೊಂಡಿದ್ದಾರೆ. ಇವರ ಪೈಕಿ 1,45,978 ಪದವೀಧರಿಗೆ ಹಣ ಕೊಡಲಾಗಿದೆ ಎಂದು ಉತ್ತರಿಸಿದರು. ನಮ್ಮ ಗ್ಯಾರಂಟಿಯಲ್ಲಿ 2023-24 ರ ಅವಧಿಯಲ್ಲಿ ವಿದ್ಯಾರ್ಥಿಗಳು ಪದವಿ ಮುಗಿಸಿರಬೇಕು. ಉದ್ಯೋಗ ಸಿಗದೇ 6 ತಿಂಗಳು ಆಗಿದ್ದವರಿಗೆ ಮಾತ್ರ ಈ ಯೋಜನೆ ಅನ್ವಯ ಅಗುತ್ತದೆ. ಯುವನಿಧಿಗೆ ಅವರೇ ಅರ್ಜಿ ಹಾಕಬೇಕು. ಅರ್ಜಿ ಹಾಕಿದವರಿಗೆ ಯುವನಿಧಿ ಕೊಡುತ್ತಿದ್ದೇವೆ ಎಂದರು. ಕರ್ನಾಟಕ ವಿಧಾನಸಭಾ ಚುನಾವಣೆಯ ಸಮಯದಲ್ಲಿ ಯವನಿಧಿಯನ್ನು ಪ್ರಕಟಿಸಲಾಗಿತ್ತು. ಪದವೀಧರರಿಗೆ ಪ್ರತಿತಿಂಗಳು 3,000 ರೂ. ಡಿಪ್ಲೋಮಾ ಪದವೀಧರರಿಗೆ 1,500 ರೂ. ನೀಡಲಾಗುವುದು ಎಂದು ಕಾಂಗ್ರೆಸ್‌ ಘೋಷಿಸಿತ್ತು

Post a Comment

0 Comments